ಖೇಣಿ ಗೆ 1 ಕೋಟಿ ಪರಿಹಾರ

AShok Kheny

08-11-2019

ವಿಜಯ ಕರ್ನಾಟಕ ವಿರುದ್ಧ ಉದ್ಯಮಿ ಅಶೋಕ್ ಖೇಣಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಖೇಣಿಗೆ ಗೆಲುವಾಗಿದೆ. ಈ ಕುರಿತು ವಿಚಾರಣೆ ನಡೆಸಿದ್ದ ಸಿಟಿ ಸಿವಿಲ್ ಕೋರ್ಟ್ ಮಾನನಷ್ಟ ಮೊಕದ್ದಮೆಯ ಪರಿಹಾರವಾಗಿ 1 ಕೋಟಿ ರೂ ನೀಡುವಂತೆ ವಿಜಯ ಕರ್ನಾಟಕಕ್ಕೆ ಆದೇಶ ನೀಡಿದೆ.

ಇದಲ್ಲದೇ ಖೇಣಿ ವಿರುದ್ಧ ವರದಿ ಪ್ರಕಟಿಸಿದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಮೇಲೂ ಸಹ ಮಾನನಷ್ಟ ಮೊಕದ್ದಮೆ ಹೂಡಲಾಗಿದ್ದು, ಈ ಪ್ರಕರಣದಲ್ಲೂ ಸಹ ಖೇಣಿ ಅವರಿಗೆ ಜಯವಾಗಿದೆ. ಪರಿಹಾರವಾಗಿ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ.

ಪತ್ರಿಕೋದ್ಯಮದಲ್ಲಿ ಇಂಥ ಪ್ರಕರಣಗಳು ಸಾಮಾನ್ಯವಾದರೂ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಎಂದು ಹೇಳಲ್ಪಡುವ ವಿಜಯ ಕರ್ನಾಟಕ ಹಾಗೂ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗಳು ಇಂಥ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು ಸೋಜಿಗ.


ಸಂಬಂಧಿತ ಟ್ಯಾಗ್ಗಳು

Ashok Kheny Court Compensation Defamation case


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ