ಬಿಎಸ್ವೈಗೆ ಒಲಿದ ‘ಕಾವೇರಿ’

Karnataka CM

18-10-2019

ಬೆಂಗಳೂರು: ಕಾವೇರಿ ನಿವಾಸ ತಮಗೆ ನೀಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ್ದ ಮನವಿಯನ್ನು ತಿರಸ್ಕರಿಸಿರುವ ಸರ್ಕಾರ ರೇಸ್‍ಕೋರ್ಸ್‍ ರಸ್ತೆಯ ರೇಸ್ ವ್ಯೂ ಕಾಟೇಜ್-2ನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಸಿದ್ದರಾಮಯ್ಯ ವಾಸವಿದ್ದ ಕಾವೇರಿ ನಿವಾಸವನ್ನು ನಿಯಮದಂತೆ ಮುಖ್ಯಮಂತ್ರಿಗೇ ನೀಡಲು ನಿಶ್ಚಯಿಸಲಾಗಿದೆ.  ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ನಂತರ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಯಾವುದೇ ಶಾಸನ ಬದ್ಧ ಹುದ್ದೆ ಇಲ್ಲದೇ ಇದ್ದರೂ ಸಹ ಕಾವೇರಿ ನಿವಾಸದಲ್ಲೇ ತಂಗಿದ್ದರು.

ಸಿಎಂ ಯಡಿಯೂರಪ್ಪನವರಿಗೆ ಹಂಚಿಕೆಯಾಗಿದ್ದ ಬಿಎಸ್‍ವೈಅವರ ಲಕ್ಕಿ ಹೌಸ್‍ಎಂದೇ ಹೇಳಲಾಗುತ್ತಿದ್ದ ರೇಸ್ ವ್ಯೂಕಾಟೇಜ್ -2ನ್ನು ಈಗ ಸಿದ್ದರಾಮಯ್ಯನವರಿಗೆ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ರೇಸ್‍ಕೋರ್ಸ್ ನಿವಾಸದ ಬದಲು ಸಿಎಂ ಗೃಹ ಕಚೇರಿ ಕೃಷ್ಣಾದ ಪಕ್ಕದಲ್ಲೇಇರುವ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದರೆ, ಪೂರ್ಣಾವಧಿ ಮುಗಿಸಬಹುದು ಎಂಬ ಕಲ್ಪನೆಯ ಜೊತೆಗೆ ಗೃಹ ಕಚೇರಿಗೆ ತೆರಳಲು ಅನಗತ್ಯ ಸಂಚಾರದಟ್ಟಣೆ ತಪ್ಪಿಸಲು ಕಡಿವಾಣ ಹಾಕಬಹುದು ಎಂಬ ಕಾರಣಕ್ಕಾಗಿ ಬಿಎಸ್‍ವೈಕಾವೇರಿಗಾಗಿ ಬೇಡಿಕೆ ಇರಿಸಿದ್ದರು. ಅದರಂತೆ ಕಾವೇರಿ ನಿವಾಸವನ್ನು ಸಿಎಂ ಬಿಎಎಸ್‍ವೈಗೆ ಹಂಚಿಕೆ ಮಾಡಲಾಗಿದೆ.

ಇದೀಗ ಕಾವೇರಿ ನಿವಾಸ ಬದಲಾವಣೆಗೆ ಮುಖ್ಯಮಂತ್ರಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಯಾವುದೇಕಾರಣಕ್ಕೂಕಾವೇರಿ ನಿವಾಸ ಬಿಡಲ್ಲಅದನ್ನು ಸಿದ್ದರಾಮಯ್ಯಗೆ ಹಂಚಿಕೆ ಮಾಡಲು ಪರಿಗಣಿಸುವಅಗತ್ಯವಿಲ್ಲ. ಅವರಿಗೆರೇಸ್‍ಕೋರ್ಸ್‍ರಸ್ತೆ ನಿವಾಸ ಹಂಚಿಕೆ ಮಾಡಿಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚನೆ ನೀಡಲಾಗಿದೆಎಂದು ಹೇಳಲಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶದಂತೆ, ಮುಖ್ಯಮಂತ್ರಿಗಳಿಗೆ ಹಂಚಿಕೆ ಮಾಡಲಾಗಿದ್ದ ರೇಸ್‍ ಕೋರ್ಸ್‍ ರಸ್ತೆಯ ರೇಸ್ ವ್ಯೂ ಕಾಟೇಜ್-2ನ್ನು ಸಿದ್ದರಾಮಯ್ಯನವರಿಗೆ ಹಂಚಿಕೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿಯೇ ಹಲವು ವರ್ಷಗಳಿಂದ ವಾಸವಿದ್ದಾರೆ. ಅವರಿಗೆ ರೇಸ್ ವ್ಯೂಕಾಟೇಜ್‍ಗೆ ಹೋಗಲು ಇಷ್ಟವಿಲ್ಲದ ಕಾರಣವೇ ಕಾವೇರಿ ನಿವಾಸಕ್ಕೆ ಬೇಡಿಕೆ ಇಟ್ಟಿದ್ದರು.

ಆದರೆ ಈಗ ರೇಸ್ ವ್ಯೂ ಕಾಟೇಜ್-2ನ್ನು ನೀಡಲಾಗಿದೆ. ಇದನ್ನುಅವರು ಸ್ವೀಕರಿಸುತ್ತಾರೆಯೋ ಅಥವಾ ಖಾಸಗಿ ನಿವಾಸದಲ್ಲಿ ವಾಸವಿರುತ್ತಾರೆಯೋ ನೋಡಬೇಕಿದೆ.

 


ಸಂಬಂಧಿತ ಟ್ಯಾಗ್ಗಳು

BS Yediyurappa Congress Siddaramaiah BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ