ಕೆ ಸಿ ರಾಮಮೂರ್ತಿ ಇನ್ನೆರಡು ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆ!

K C Ram Murthy

17-10-2019

ರಾಜಸ್ಯಸಭಾ ಸದಸ್ಯ ಸ್ಥಾನಕ್ಕೆ ಕೆ.ಸಿ ರಾಮಮೂರ್ತಿ ನಿನ್ನೆ ರಾಜೀನಾಮೆ ನೀಡಿದ್ದಾರೆ. ಆದರೆ ರಾಜೀನಾಮೆ ನೀಡುವಾಗ ರಾಮಮೂರ್ತಿಯವರು ಯಾವ ಕಾರಣಕ್ಕಾಗಿ ರಾಜೀನಾಮೆ ನೀಡುತ್ತಿರುವುದಾಗಿ ಕಾರಣವನ್ನು ಹೇಳಿಲ್ಲವಾದರೂ ಇದರ ಹಿಂದೆ ಬಿಜೆಪಿ ಸೇರ್ಪಡೆಯ ಉದ್ದೇಶವಿದೆ ಎಂದೇ ರಾಜಕೀಯ ವಲಯದಲ್ಲಿ ಚರ್ಚಿಸಲಾಗುತ್ತಿದೆ.

ಸೂಪರ್ ಸುದ್ದಿಗೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಕೆ.ಸಿ ರಾಮಮೂರ್ತಿ ರಾಜೀನಾಮೆಗೆ  ನಿಜವಾದ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬುದೇ ಆಗಿದೆ. ಅವರನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುದರ ಬದಲಾಗಿ ಲೆಕ್ಕಕ್ಕಿದ್ದಾರೆ ಆದರೆ ಆಟಕ್ಕಿಲ್ಲ ಎಂಬಂತೆ ಕಾಂಗ್ರೆಸ್ ಪಕ್ಷ ನಡೆಸಿಕೊಂಡಿತ್ತು. ಅವರನ್ನು ಸಕ್ರೀಯವಾಗಿ ಬಳಸಿಕೊಳ್ಳದೇ, ಯಾವುದೇ ಪ್ರಮುಖ ಸ್ಥಾನಮಾನ ಅಥವಾ ಜವಾಬ್ದಾರಿ ನೀಡಿಲ್ಲದಿರುವುದೇ ರಾಜೀನಾಮೆಗೆ ಕಾರಣ ಎನ್ನಲಾಗಿದೆ.

ನಿವೃತ್ತ ಐಪಿಎಸ್ ಅಧಿಕಾರಿ ರಾಮಮೂರ್ತಿ ಅವರನ್ನು 2016ರಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಿಂದ ರಾಜ್ಯಸಭೆಗೆ ನೇಮಕ ಮಾಡಿತ್ತು. ಈ ಮಧ್ಯೆ ರಾಮಮೂರ್ತಿ ಅವರು ಇನ್ನೆರಡು ದಿನಗಳಲ್ಲಿ ಬಿಜೆಪಿ ಸೇರುವುದು ಖಚಿತ ಎಂದು ಹೇಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

K C Ramamurthy BJP Congress MP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ