ನಾಳೆಯಿಂದ ವಿಧಾನಮಂಡಲ ಅಧಿವೇಶನ

Session starts from Tomorrow

09-10-2019

ಬೆಂಗಳೂರು: ನಾಳೆ ಆರಂಭಗೊಳ್ಳಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಆಯವ್ಯಯಕ್ಕೆ ಅಂಗೀಕಾರ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಸದಸ್ಯರ ಭಾವನೆ ಸಲಹೆಗಳನ್ನು ಪಡೆದುಕೊಳ್ಳುತ್ತೇವೆ. ನಾಳೆಯ ಅಧಿವೇಶನಕ್ಕೆ ಸರ್ಕಾರ ಎಲ್ಲಾ ರೀತಿಯಲ್ಲೂ ಸಿದ್ಧವಾಗಿದೆ. ನೆರೆ, ಬರದ ವಿಚಾರವನ್ನೇ ಪ್ರತಿಪಕ್ಷಗಳು ಅಸ್ತ್ರವನ್ನಾಗಿಸಿಕೊಳ್ಳುವುದು ಗೊತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಬರ ನಿರ್ವಹಣೆ ಹೇಗೆ ಮಾಡಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಎಹೆಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾದ ವಿಚಾರದಲ್ಲಿ ಯಾವ ರೀತಿ ನಡೆಕೊಂಡಿದ್ದರು ಎನ್ನುವುದು ಗೊತ್ತಿದೆ. ಅವರ ಅಸಹಾಯಕತೆಯನ್ನು ಎಲ್ಲಾ ಕಡೆ ಹೇಳಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಹಾಗೆಂದು ಅವರ ಲೋಪದೋಷಗಳು ನಮಗೆ ಆಧಾರವಲ್ಲ ಎಂದರು.

ಜನರ ಕಷ್ಟ ಸುಖದಲ್ಲಿ ಆಗುವುದು ನಮ್ಮ ಕರ್ತವ್ಯ. ಹಿಂದೆಂದೂ ಕೊಡದಂತ ಪರಿಹಾರವನ್ನು ಕೊಡುವ ಕೆಲಸ ನಡೆಯುತ್ತಿದೆ. ಐದು ಲಕ್ಷ ರೂ. ಹಣವನ್ನು ಮನೆ ನಿರ್ಮಾಣಕ್ಕೆ ಕೊಡಲಾಗುವುದು. ಸರ್ಕಾರದ ಖಜಾನೆಯಲ್ಲಿ ಹಣದ ಸಮಸ್ಯೆ ಇದ್ದರೂ ಸಹ ಸಂತ್ರಸ್ತರಿಗೆ ಪರಿಹಾರ ಕೊಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.
ಸದನದಲ್ಲಿ ವಿಪಕ್ಷಗಳು ರಾಜಕೀಯ ಪ್ರೇರಿತವಾಗಿ ಚರ್ಚೆ ಮಾಡುವುದನ್ನು ಬಿಟ್ಟು, ಸಮಸ್ಯೆಗಳ ಕುರಿತು ಚರ್ಚೆ ಮಾಡಲಿ. ವಿಷಯಾಧಾರಿತ ಚರ್ಚೆಯಲ್ಲಿ ಯಾವುದೇ ಲೋಪದೋಷಗಳಿದ್ದರೂ ಅದನ್ನು ಸರಿಪಡಿಸಿಕೊಳ್ಳಲು ಸರ್ಕಾರ ಸಿದ್ಧವಾಗಿದೆ ಎಂದರು.
ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ಗೊಂದಲ ಇರುವುದು ಅವರ ಪಕ್ಷದ ಆಂತರಿಕ‌ ವಿಚಾರ. ಅದರ ಬಗ್ಗೆ ತಾವು ಹೆಚ್ಚು ಮಾತನಾಡುವುದು ಸೂಕ್ತವಲ್ಲ ಎಂದನಿಸುತ್ತದೆ‌. ಜನರೇ ಎಲ್ಲವನ್ನು ಗಮನಿಸುತ್ತಿದ್ದಾರೆ. ಬೇರೆಯವರ ಕಡೆ ಬೆರಳು ತೋರುಸುತ್ತಿದ್ದವರ ಬೆರಳುಗಳೇ ಅವರ‌ ಕಡೆ ತೋರುವಂತಾಗಿದೆ‌. ಅವರ ಮನೆಗೆ ಬೆಂಕಿ ಹತ್ತಿದೆ.‌ ಅದನ್ನು ತಣ್ಣಗೆ ಮಾಡಿಕೊಳ್ಳುವ ಕೆಲಸ ಮಾಡಲಿ ಎಂದು ಸಿದ್ದರಾಮಯ್ಯಗೆ ಅಶ್ವತ್ಥ ನಾರಾಯಣ ತಿರುಗೇಟು ನೀಡಿದರು.


ಸಂಬಂಧಿತ ಟ್ಯಾಗ್ಗಳು

Session Ashwath Narayan BJP Siddaramaiah


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ