ವೈಟ್‌ ಜರ್ಸಿಯಲ್ಲಿ ಹೊಸ ದಾಖಲೆ ಬರೆದ "ಹಿಟ್"ಮ್ಯಾನ್‌

rohit sharma sets new record in white jersey

05-10-2019

ಟೆಸ್ಟ್‌ ಆರಂಭಿಕನಾಗಿ ಕಣಕ್ಕಿಳಿದ ತಮ್ಮ ಮೊದಲನೇ ಪಂದ್ಯದಲ್ಲೆ ಹಿಟ್‌ ಮ್ಯಾನ್‌ ಹೊಸ ದಾಖಲೆ ಸೃಷ್ಟಿಸಿದ್ದಾರೆ.  ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್‌ ಪಂದ್ಯದಲ್ಲಿ ರೋಹಿತ್‌ ಶರ್ಮ ಒಟ್ಟು 13 ಸಿಕ್ಸರ್‌ ಸಿಡಿಸಿ , ವಾಸಿಂ ಅಕ್ರಂ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ನೆಲಸಮ ಮಾಡಿದ್ದಾರೆ. ಅಕ್ರಂ 1996 ರಲ್ಲಿ ಜಿಂಬಾಬ್ವೆ ವಿರುದ್ಧ 12 ಸಿಕ್ಸರ್‌ ಸಿಡಿಸಿದ್ದರು.

ಇನ್ನು ಏಕದಿನ ಮತ್ತು ಟಿ- ಟ್ವೆಂಟಿ ಕ್ರಿಕೆಟ್ ನ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿರುವ ಭಾರತೀಯ ಎಂಬ  ದಾಖಲೆ ಹೊಂದಿರುವ ರೋಹಿತ್,  ಇದೀಗ ಮೂರು ಮಾದರಿಯ ಕ್ರಿಕೆಟ್ ನಲ್ಲಿ  ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. 2013ರ ಬೆಂಗಳೂರು ಪಂದ್ಯದಲ್ಲಿ ರೋಹಿತ್ ಬಾರಿಸಿದ್ದ 16 ಸಿಕ್ಸ್ ಏಕದಿನ ಕ್ರಿಕೆಟ್ ನ ದಾಖಲೆಯಾಗಿದ್ದರೆ, 2017ರಲ್ಲಿ ಲಂಕಾ ವಿರುದ್ಧದ ಟಿ ಟ್ವೆಂಟಿ ಪಂದ್ಯದಲ್ಲಿ 10 ಸಿಕ್ಸರ್ ಬಾರಿಸಿದ್ದರುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ