ವಿವಾಹ ನೊಂದಣಿ ಇನ್ನು ಮುಂದೆ ಕಡ್ಡಾಯ !

Kannada News

13-06-2017

ಲಖ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ಯೋಗಿ ಆದಿತ್ಯಾ ನಾಥ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಬಳಿಕ, ಹಲವಾರು ಯೋಜನೆಗಳು ಮತ್ತು ಕಾನೂನುಗಳನ್ನು ಜಾರಿಗೆ ತಂದು ಎಲ್ಲರ ಗಮನ ಸೆಳೆಯಿತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ಉತ್ತರ ಪ್ರದೇಶದ ಸರ್ಕಾರ ಉತ್ತರ ಪ್ರದೇಶದೆಲ್ಲೆಡೆ ವಿವಾಹವಾಗುವ ಎಲ್ಲರೂ ನೊಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಲು ನಿರ್ಧಾರ ಮಾಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  ಈ ಪ್ರಸ್ತಾವನೆಯನ್ನು ಮಾಡಿದ್ದು, ಮುಂಬರುವ ಉತ್ತರ ಪ್ರದೇಶದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ. ಮೂಲಗಳ ಪ್ರಕಾರ ಈ ನೂತನ ನೀತಿಯು ಮುಸ್ಲೀಮರನ್ನು ಒಳಗೊಂಡಂತೆ ಎಲ್ಲರಿಗೂ ಅನ್ವಯಿಸಲಿದೆ ಎಂದು ಹೇಳಲಾಗುತ್ತಿದೆ. ವಿವಾಹ ನೊಂದನಣಿ ಕುರಿತು ಮಾಜಿ ಮುಖ್ಯಮಂತ್ರಿಯಾದ ಅಖಿಲೇಶ್ ಯಾದವ್ ಅವರ ಅಧಿಕಾರವಧಿಯಲ್ಲಿ ಸಮಿತಿಯನ್ನು ನೇಮಿಸಲಾಗಿದ್ದು, ಇದನ್ನು ವಿರೋಧಿಸಿ ಮುಸ್ಲೀಮರು ಪ್ರತಿಭಟಿಸಿದ್ದರು. ಸಮಾಜವಾದಿ ಸರ್ಕಾರವು ಮುಸ್ಲೀಮನ್ನು ಈ ಕಾನೂನಿನಿಂದ ಹೊರಗಿಡಲಾಗಿತ್ತಾದರೂ ಈ ಕುರಿತ ಕನೂನು ಪುಸ್ತಕವನ್ನು ಬಿಡುಗಡೆ ಮಾಡಲೇ ಇಲ್ಲ.  ಈ ಹೊಸ ಕಾನೂನಿನಡಿ ವಿವಾಹವಾಗುವವರು ನೊಂದಣಿಯಾಗದಿದ್ದರೆ ಅವರು ಸರ್ಕಾರದ ಯೋಜನೆಗಳಿಂದ ವಂಚಿತರಾಗಲಿದ್ದಾರೆ, ಮತ್ತು ನೊಂದಣಿಯಾಗದವರ ವಿರುದ್ಧ ಕ್ರಮ ಮತ್ತು ದಂಡವಿಧಿಸುವ ಅವಕಾಶಗಳು ಕಾನೂನಿನಲ್ಲಿ ಇರಲಿವೆ ಎಂದು  ತಿಳಿದು ಬಂದಿದೆ.       

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ