ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದ ‘ವಾರ್’!04-10-2019

ಬಾಲಿವುಡ್ ನಲ್ಲಿ ಸದ್ಯ ವಾರ್ ನದ್ದೇ ಅಬ್ಬರ. ಟೈಗರ್ ಶ್ರಾಫ್ ಹಾಗೂ ಹೃತಿಕ್ ರೋಷನ್ ನಟಿಸಿರುವ ವಾರ್ ಚಿತ್ರ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 53.35 ಕೋಟಿ ರೂ ಕಲೆಕ್ಷನ್ ಮಾಡಿದೆ. ವಿದೇಶ ಸೇರಿದಂತೆ 5350 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂದಿರುವ ವಾರ್ ಚಿತ್ರ ಮೊದಲ ದಿನದ ಕಲೆಕ್ಷನ್ ನಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದಿದೆ.

ಈ ಹಿಂದೆ ಹಾಲಿವುಡ್ ನ ಅವೆಂಜರ್ ದಿ ಎಂಡ್ ಗೇಮ್ 50 ಕೋಟಿ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಥಂಗ್ಸ್ ಆಫ್ ಹಿಂದೂಸ್ತಾನ್ 52.25 ಕೋಟಿ, ಹ್ಯಾಪಿ ನ್ಯೂ ಇಯರ್ 44.97 ಕೋಟಿ, ಭಾರತ್ 42 ಕೋಟಿ ರೂ ಮೊದಲ ದಿನದ ಗಳಿಕೆಯಾಗಿತ್ತು. ಆ್ಯಕ್ಷನ್ ಚಿತ್ರ ವಾರ್ ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದು, ವಾಣಿ ಕಪೂರ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅವರಿಗೂ ಇದು ದೊಡ್ಡ ಮಟ್ಟದ ಯಶಸ್ಸು ಕಂಡುಕೊಟ್ಟಿದೆ. ಹಾಗೆಯೇ ನಿರ್ದೇಶಕ ಸಿದ್ಧಾರ್ಥ್ ಆನಂದ್ ಗೆ ಕೂಡ ಇದು ಪ್ಲಸ್ ಪಾಯಿಂಟ್. ಜೊತೆಗೆ ಯಶ್ ರಾಜ್ ಫಿಲ್ಮ್ ನಲ್ಲಿ ದೊಡ್ಡ ಮೊಟ್ಟದ ಮೊದಲ ದಿನದ ಗಳಿಕೆ ಮಾಡಿದ ಚಿತ್ರ ಇದಾಗಿದೆ. ಸಾಲು ಸಾಲು ರಜೆಗಳಿರುವ ದಿನಗಳಲ್ಲಿ ಬಿಡುಗಡೆಯಾಗಿರುವುದು ಚಿತ್ರದ ಯಶಸ್ಸಿಗೆ ಮತ್ತೊಂದು ಮೆಟ್ಟಿಲಾಗಿದೆ.  

ಈ ವೇಳೆ ಮಾತನಾಡಿರುವ ನಿರ್ದೇಶಕ ಸಿದ್ಧಾರ್ಥ್, ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿರುವ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

War Tiger Shraf Hritik Roshan Bollywood


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ