ಬಾಯ್ ಫ್ರೆಂಡ್ ಸುತ್ತಾಡಲು ಬಂದಿಲ್ಲವೆಂದು ಜೀವವನ್ನೇ ಬಿಟ್ಟಳು!

Hanging

23-09-2019

ಬೆಂಗಳೂರು: ಪ್ರಿಯಕರ ಹೊರಗಡೆ ಸುತ್ತಾಡಲು ಒಪ್ಪದಿರುವುದಕ್ಕೆ ಮನನೊಂದ ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಯನಗರದಲ್ಲಿ ನಡೆದಿದೆ. ಮೂಲತಃ ತಮಿಳುನಾಡಿನ ತಂಜಾವೂರಿನ ಗಾಯತ್ರಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದಳು. ತನ್ನದೇ ಊರಿನ ಸುದರ್ಶನ್ ಎಂಬುವವನನ್ನು ಪ್ರೀತಿಸುತ್ತಿದ್ದಳು. ಸುದರ್ಶನ್ ಹಾಗೂ ಗಾಯತ್ರಿ ಒಂದೇ ಊರಿನವರಾಗಿದ್ದು, ಪಿಯುಸಿಯಿಂದ ಒಟ್ಟಿಗೆ ವ್ಯಾಸಂಗ ಮಾಡಿದ್ದರು.
ಗಾಯತ್ರಿ ಭಾನುವಾರ ಮುಂಜಾನೆಯಿಂದ ಸಂಜೆವರೆಗೆ ಸುದರ್ಶನ್ ಜೊತೆ ಸುತ್ತಾಡಿದ್ದಳು. ಮತ್ತೆ ಭಾನುವಾರ ಸಂಜೆಯೂ ಸಹ ಸುದರ್ಶನ್‍ನನ್ನು ಸುತ್ತಾಡಲು ಕರೆದಿದ್ದಾಳೆ. ಆದರೆ, ಮತ್ತೆ ಹೊರಗಡೆ ಸುತ್ತಾಡಲು ಸುದರ್ಶನ್ ನಿರಾಕರಿಸಿದ್ದನು. ಇದರಿಂದ ಬೇಸರಗೊಂಡ ಗಾಯತ್ರಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುದರ್ಶನ್‍ಗೆ ಮೊಬೈಲ್ ಸಂದೇಶ ಕಳುಹಿಸಿದ್ದಳು.
ಗಾಯತ್ರಿ ಮೆಸೇಜ್ ನೋಡಿ ಕೋಪಗೊಂಡ ಸುದರ್ಶನ್ ಆಕೆಯ ನಂಬರ್ ಬ್ಲಾಕ್ ಮಾಡಿದ್ದಾನೆ. ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಗಾಯತ್ರಿ ತಾನು ನೆಲೆಸಿದ್ದ ಪಿಜಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಬನಶಂಕರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Hanging Boyfriend Hostel PG


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ