ಹೌಡಿ ಮೋದಿ ಈವೆಂಟ್ ಸ್ಪಾನ್ಸರ್ಸ್ ಯಾರು ಗೊತ್ತ?

Oyo and Walmart sponsors Howdy Modi

23-09-2019

ಅಮೆರಿಕದ ಹ್ಯೂಸ್ಟನ್ ನಲ್ಲಿ ಆಯೋಜಿಸಲಾಗಿದ್ದ ಹೌಡಿ ಮೋದಿ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ. ಅಲ್ಲಿನ ಆನಿವಾಸಿ ಭಾರತೀಯರು ಏರ್ಪಡಿಸಿದ್ದ ಈ ಕಾರ್ಯಕ್ರಮ ಹಿಂದೆಂದೂ ನಡೆಯದಂತಹ ಕ್ಷಣಗಳಿಗೆ ಸಾಕ್ಷಿಯಾಯಿತು. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಗಣ್ಯರ ಉಪಸ್ಥಿತಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ಕೊಟ್ಟಿದ್ದು ಸುಳ್ಳಲ್ಲ.

ಈ ಮಧ್ಯೆ ಇಡೀ ವಿಶ್ವದ ಗಮನ ಸೆಳೆದಿದ್ದ ಈ ಕಾರ್ಯಕ್ರಮದ ಪ್ರಾಯೋಜಕತ್ವ ಪಡೆದುಕೊಂಡಿದ್ದು ಓಯೋ ಹೋಟೆಲ್-ಹೋಮ್ಸ್, ಆನ್ ಲೈನ್ ರೈಟೈಲ್ ಕಂಪನಿಯಾದ ವಾಲ್ ಮಾರ್ಟ್ ಹಾಗೂ ಅಮೆರಿಕದ ಜೈವಿಕ ಅನಿಲದ ಟೆಲ್ಯೂರಿಯನ್ ಕಂಪನಿಗಳು ಎಂಬುದು ಕುತೂಹಲಕರ.

ಈಗಾಗಲೇ ಇ ಕಾಮರ್ಸ್ ಅಥವಾ ಆನ್ ಲೈನ್ ಮಾರ್ಕೆಟಿಂಗ್ ಬಗ್ಗೆ ಸಾಕಷ್ಟು ಬದಲಾವಣೆಗೆ ಯೋಜಿಸುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈ ಬಗ್ಗೆ ಕರಡು ಕೂಡ ಪ್ರಕಟಿಸಿದೆ. ಕೇಂದ್ರ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವಾಲಯ ಇತ್ತೀಚಿಗೆ ಸಿದ್ಧಪಡಿಸಿರುವ ಇ ಕಾಮರ್ಸ್ ನೀತಿಯಲ್ಲಿರುವ ಅಂಶಗಳು ಮತ್ತು ಅದರಲ್ಲಿರುವ ಪರಿಣಾಮಗಳ ಬಗ್ಗೆ ಉದ್ಯಮ ವಲಯದಲ್ಲಿ ಸಾಕಷ್ಟು ಚರ್ಚೆ ನಡೆದಿದೆ.

ಆದರೆ ಇದೀಗ ಅಮೆರಿಕದಲ್ಲಿ ನಡೆದ ಭಾರತದ ಪ್ರಧಾನಮಂತ್ರಿಗಳ ಅತಿದೊಡ್ಡ ಕಾರ್ಯಕ್ರಮವನ್ನು ಖಾಸಗಿ ಕಂಪನಿಗಳಾದ ವಾಲ್ ಮಾರ್ಟ್ ಹಾಗೂ ಓಯೋ ಪ್ರಾಯೋಜಿಸಿದ್ದು, ಇದಕ್ಕೆ ಯಾವ ಆಧಾರದ ಮೇಲೆ ಒಪ್ಪಿಗೆ ನೀಡಲಾಯಿತು ಹಾಗೂ ಇದಕ್ಕೆ ಯಾವ ನೈತಿಕತೆ ಇದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Wallmart Trump America Howdy Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ