ಇಟಲಿ ಹುಡುಗಿಗಾಗಿ 30 ಲಕ್ಷ ಖರ್ಚು ಮಾಡಿದ ! ಆಮೇಲೇನಾಯ್ತು?

crime

19-09-2019

ಬೆಂಗಳೂರು: ವಧುವಿನ ಹುಡುಕಾಟದಲ್ಲಿದ್ದ ಚಿಕ್ಕಬಳ್ಳಾಪುರದ ವಿಚ್ಚೇಧಿತ ಹೈದನೊಬ್ಬ ಇಟಲಿಯ ಸುಂದರಿಯ ವಿವಾಹವಾಗುವ ಆಗೆ ಬಿದ್ದು ೩೦ ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡು ಸಾಲಗಾರನಾಗಿ ಸೈಬರ್ ಪೊಲೀಸ್ ಠಾಣೆ  ದೂರು ನೀಡಿದ್ದಾನೆ.
ಇಟಲಿಯ ಸುಂದರಿಯಿಂದ ವಂಚನೆಗೊಳಗಾಗಿರುವ ಮುನಿರಾಜು ನೀಡಿರುವ ದೂರು ದಾಖಲಿಸಿರುವ ಚಿಕ್ಕಬಳ್ಳಾಪುರದ ಸೈಬರ್ ಪೊಲೀಸರು ಕಾಣದ ಸುಂದರಿಗಾಗಿ ಶೋಧ ನಡೆಸಿದ್ದಾರೆ.
ವಿಚ್ಚೇಧಿತನಾಗಿದ್ದ ಮುನಿರಾಜು ಮತ್ತೊಂದು ಮದುವೆ ಆಗಲು ಕನ್ನಡ ಮ್ಯಾಟ್ರಿಮೋನಿಯಲ್ ನಲ್ಲಿ ತಮ್ಮ ಸ್ವವಿವರವನ್ನು ಹಾಕಿ ಸೂಕ್ತ ವಧುವಿನ ಹುಡಕಾಟದಲ್ಲಿದ್ದಾಗ ಅಂತರರಾಷ್ಟ್ರೀಯ ನಂಬರ್‌ನಿಂದ ವಾಟ್ಸಾಪ್ ಮುಖಾಂತರ ಚಾಟ್ ಮಾಡಿದ ಸುಂದರಿ ನಾನು ಮ್ಯಾಟ್ರಿಮೋನಿಯಲ್‌ನಲ್ಲಿ ನಿಮ್ಮ ಸ್ವವಿವರವನ್ನು ನೋಡಿದೆ. ನಿಮ್ಮನ್ನ ಮದುವೆ ಆಗಬೇಕು ಅಂತಿದ್ದೀನಿ ಅಂದಿದ್ದಾಳೆ.
ಮೊದಲು ಚಾಟಿಂಗ್
ಸುಂದರಿಯ  ಪೋಟೋ ನೋಡಿ ಆಕಾಶಕ್ಕೆ ಮೂರೇ ಗೇಣು ಅಂತ ಕುಣಿದಾಡಿದ ಮುನಿರಾಜು ಬ್ಯೂಟಿ ಜೊತೆ ಚಾಟಿಂಗ್‌ಗೆ ಇಳಿದಿದ್ದಾರೆ. ಅತ್ತ ಕಡೆಯಿಂದ ವಾಟ್ಸಪ್ ಮುಖಾಂತರ ಕರೆ ಮಾಡಿದ ಆಕೆ ನಾನು ಭಾರತದವಳು ಸದ್ಯ ಇಟಲಿಯಲ್ಲಿ ಪೆಪ್ಸಿಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಮನೆಯವರಿಗೆಲ್ಲಾ ನಿಮ್ಮ ಪ್ರೊಫೈಲ್ ತೋರಿಸಿದ್ದೇನೆ ಭಾರತಕ್ಕೆ ಬಂದು ನಿಮ್ಮನ್ನ ಮದುವೆಯಾಗುತ್ತೇನೆ ಎಂದಿದ್ದಾಳೆ. ಮೊದೆಲೆರೆಡು ತಿಂಗಳು ಇದೇ ರೀತಿ ಚಾಟಿಂಗ್, ಇಂಟರ್ನೆಟ್ ಕಾಲ್ ಮಾಡಿದ ಬ್ಯೂಟಿ, ನಾನು ಭಾರತಕ್ಕೆ ಬರಲಿದ್ದು ಇಟಲಿಯಿಂದ ಟಿಕೆಟ್ ಬುಕ್ ಮಾಡಬೇಕು ಹಣ ಕಳಿಸುವಂತೆ ಕೇಳಿ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾಳೆ.
ನಕಲಿ ಖಾತೆ ಬಳಕೆ
ಇಟಲಿಯಿಂದ ದೆಹಲಿಗೆ ಬಂದಿದ್ದೀನಿ. ನನ್ನ ಬಳಿ ಇಟಲಿಯ ಒಂದೂವರೆ ಕೋಟಿ ಕರೆನ್ಸಿ ಇದ್ದು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಹಿಡಿದುಕೊಂಡಿದ್ದಾರೆ. ಅವರಿಗೆ ತೆರಿಗೆ ಪಾವತಿ ಮಾಡಿದರೆ ಎಲ್ಲಾ ಹಣ ವಾಪಾಸ್ ಮಾಡುತ್ತಾರೆ. ಆ ಹಣ ನಿನಗೆ ಕೊಡುವುದಾಗಿ ನಂಬಿಸಿ ಆಸೆ ಹುಟ್ಟಿಸಿ ಮತ್ತೆ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡಿದ್ದಾಳೆ. ಹೀಗೆ ಒಂದಲ್ಲ ಒಂದು ನೆಪ ಹೇಳಿ ಮುನಿರಾಜು ಬಳಿ ಬರೋಬ್ಬರಿ ೨೭ ಲಕ್ಷ ರೂಪಾಯಿ ಹಣ ಪಡೆದ ಬ್ಯೂಟಿ ಕೊನೆಗೆ ಫೋನ್ ಸ್ವಿಚ್ ಆಫ್ ಮಾಡಿ ಸುಮ್ಮನಾಗಿದ್ದಾಳೆ.
ಸಾಲಗಾರನಾಗಿ ಸಂಕಷ್ಟ
ಫೋನ್ ಸ್ವಿಚ್ಛ್ ಅಫ್ ಆಗಿದ್ದರಿಂದ ಅನುಮಾನಗೊಂಡ ಮುನಿರಾಜು ಮೊದಲು ಬ್ಯಾಂಕಿಗೆ ಹೋಗಿ ಹಣ ಹಾಕಿದ ಖಾತೆಗಳನ್ನು ಪರೀಶೀಲನೆ ಮಾಡಿಸಿದ್ದಾರೆ. ಆಗ ಅವೆಲ್ಲವೂ ನಕಲಿ ಖಾತೆ ಎನ್ನುವುದು  ಗೊತ್ತಾಗಿದೆ. ಹೀಗಾಗಿ ಸುಂದರಿ ಸಿಗಲಿದ್ದಾಳೆ ಮದುವೆ ಅಗೋಣ ಎಂದು  ಸಾಲ ಸೋಲ ಮಾಡಿ ಸರಿಸುಮಾರು ೩೦ ಲಕ್ಷ ಸುರಿದ ಮುನಿರಾಜು ಈಗ ಚಿಕ್ಕಬಳ್ಳಾಪುರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Italy Matrimony Marriage Crime


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ