ಪುನೀತ್ ಗಿಂತ ರಕ್ಷಿತಾ ಪಾಪ್ಯುಲಾರಿಟಿ ಜಾಸ್ತಿ!

13-09-2019
ಮನೋರಂಜನಾ ವಾಹಿನಿಗಳು ವಾರಾಂತ್ಯದಲ್ಲಿ ವೀಕ್ಷಕರ ಅಭಿರುಚಿಗೆ ತಕ್ಕಂತಹ ವಿಶೇಷವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ. ಅದರಲ್ಲೂ ನಂ.1 ಸ್ಥಾನಕ್ಕಾಗಿ ಯಾವಾಗಲೂ ಪೈಪೋಟಿ ನಡೆಸುವ ಕಲರ್ಸ್ ಕನ್ನಡ ಹಾಗೂ ಜೀ ಕನ್ನಡ ಕೂಡ ಹಿಂದೆ ಬಿದ್ದಿಲ್ಲ. ಈ ಎರಡೂ ವಾಹಿನಿಗಳು ಪ್ರಸಿದ್ಧ ನಟ/ನಟಿಯರನ್ನು ನಿರೂಪಕರನ್ನಾಗಿಸಿ ವಾರಾಂತ್ಯದಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ.
ಕಲರ್ಸ್ ಕನ್ನಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಾರಥ್ಯದಲ್ಲಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿದರೆ, ಜೀ ಕನ್ನಡ ನಟಿ ರಕ್ಷಿತಾ ಪ್ರೇಮ್ ಹಾಗೂ ವಿಜಯ್ ರಾಘವೇಂದ್ರ, ಅರ್ಜುನ್ ಜನ್ಯ ಜೊತೆಯಾಗಿ ನಡೆಸಿಕೊಡುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ.
ಆದರೆ ಈ ಬಾರಿಯ ಟಿವಿಆರ್ (ಟೆಲಿವಿಜನ್ ರೇಟಿಂಗ್) ನಲ್ಲಿ ಕನ್ನಡದ ಕೋಟ್ಯಧಿಪತಿಗಿಂತ ಡಿಕೆಡಿ ಗೆ ಜಾಸ್ತಿ ಪಾಯಿಂಟ್ಸ್ ಬಂದಿದೆ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ 3.6 ರೇಟಿಂಗ್ ಇದ್ದರೆ, ಡಿಕೆಡಿ ಗೆ 9.2 ರೇಟಿಂಗ್ ಲಭಿಸಿದೆ. ಹೀಗಾಗಿ ಪುನೀತ್ ಗಿಂತ ನಟಿ ರಕ್ಷಿತಾ ಗೆ ಪಾಪ್ಯುಲಾರಿಟಿ ಜಾಸ್ತಿ ಇದೆಯಾ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಒಂದು ಕಮೆಂಟನ್ನು ಹಾಕಿ