ಪ್ರತಿಭಟನೆಯ ಕಾವು ಪೊರಕೆ ಹಿಡಿದ ಮೇಯರ್ !

Kannada News

13-06-2017

ಮೈಸೂರು:- ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ, ಮೈಸೂರಿನಲ್ಲಿ ಪೊರಕೆ ಹಿಡಿದು ಸ್ವಚ್ಚತಾ ಕಾರ್ಯವನ್ನು  ಮೇಯರ್ ಅವರೇ ಕೈಗೊಂಡಿದ್ದಾರೆ. ಕಸ ವಿಲೇವಾರಿಗಾಗಿ ಪೊರಕೆ ಹಿಡಿದ ಮೈಸೂರು ಮೇಯರ್ ಎಂ.ಜೆ.ರವಿಕುಮಾರ್, ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡರು. ನಿನ್ನೆಯಿಂದ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿಯನ್ನು ಕೈಗೊಂಡಿರುವುದರಿಂದ, ನಗರದಾದ್ಯಂತ ಎಲ್ಲೆಂದರಲ್ಲಿ  ಕಸ ಹಾಗೆ  ಬಿದ್ದಿದೆ. ಹೀಗಾಗಿ ಕಸ ವಿಲೇವಾರಿಗೆ ಮೇಯರ್ ಮುಂದಾಗಿದ್ದಾರೆ. ಜೆ.ಸಿ.ಬಿ ಯಂತ್ರಗಳ ಸಹಾಯದಿಂದ ಮೇಯರ್ ರವಿಕುಮಾರ್ ಕಸ ವಿಲೇವಾರಿ ಮಾಡಲು ಮುಂದಾದರು. ಪ್ರತಿಭಟನೆಯ ಕಾವಿನಿಂದ ಮೇಯರ್ ಕೈಗೂ ಪೊರಕೆ ಬಂದಿದೆ. ಮೈಸೂರಿನ ಪಾರಂಪರಿಕ,,ದೇವರಾಜ ಮಾರುಕಟ್ಟೆ ಹಾಗೂ ಆಸುಪಾಸಿನ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯವನ್ನು ಮೇಯರ್ ರವಿಕುಮಾರ್ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ