ಇಂದು ಇಡಿಯಿಂದ ಡಿಕೆಶಿ ಪುತ್ರಿ ವಿಚಾರಣೆ

DK Shivalimar

12-09-2019

ಬೆಂಗಳೂರು : ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಗೆ ಇಡಿ ಶಾಕ್ ನೀಡಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿಯಿಂದ ಸಮನ್ಸ್‍ಜಾರಿ ಮಾಡಲಾಗಿದ್ದು, ಇದೀಗ ಐಶ್ವರ್ಯ ಅವರು ವಿಚಾರಣೆಗೆ ತೆರಳಿದ್ದಾರೆ.

ಸೆ. 12 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಅವರು ಇಂದು ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ. 2017ರ ನವೆಂಬರ್ ತಿಂಗಳಿನಲ್ಲಿ ಶಿವಕುಮಾರ್ ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಬೆಂಗಳೂರಿನ ಕ್ವೀನ್ಸ್‍ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದರು. ಈಗ ಮತ್ತೆ ವಿಚಾರಣೆಗೆ ಬರುವಂತೆ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಬರುವಂತೆ ಇಡಿ ಹೇಳಿದೆ.


ಸಂಬಂಧಿತ ಟ್ಯಾಗ್ಗಳು

DK Shivkumar Aishwarya ED Summons


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ