2ನೇ ಸ್ಥಾನಕ್ಕೆ ಕುಸಿದ ಕಲರ್ಸ್ ಕನ್ನಡ

Kannada entertainment channels

11-09-2019

ಕನ್ನಡ ಮನರಂಜನಾ ವಾಹಿನಿಗಳಾದ ಕಲರ್ಸ್ ಕನ್ನಡ ಹಾಗೂ ಜೀ ಕನ್ನಡ ಮಧ್ಯೆ ನಂ.1 ಸ್ಥಾನಕ್ಕಾಗಿ ಮೊದಲಿನಿಂದಲೂ ಪೈಪೋಟಿ ನಡೆದಿದೆ. ಇಷ್ಟು ದಿನ ನಂ.1 ಪಟ್ಟ ಅಲಂಕರಿಸಿದ್ದ ಕಲರ್ಸ್ ಕನ್ನಡ ವಾಹಿನಿ ಈಗ 2ನೇ ಸ್ಥಾನಕ್ಕೆ ಕುಸಿದಿದೆ. ಈ ಮೊದಲು 700ಕ್ಕೂ ಅಧಿಕವಿದ್ದ ಕಲರ್ಸ್ ಕನ್ನಡ ವಾಹಿನಿ ಟಿವಿಆರ್ ಸದ್ಯ 500ಕ್ಕಿಂತ ಕಡಿಮೆಯಾಗಿದೆ. ಹಾಗೆಯೇ 2 ನೇ ಸ್ಥಾನದಲ್ಲಿದ್ದ ಜೀ ಕನ್ನಡ ವಾಹಿನಿ 1 ನೇ ಸ್ಥಾನಕ್ಕೇರಿದೆ. ಇನ್ನು 3ನೇ ಸ್ಥಾನದಲ್ಲಿ ಸ್ಟಾರ್ ಸುವರ್ಣ ವಾಹಿನಿ ಇದ್ದು, ಉದಯ ವಾಹಿನಿ 4ನೇ ಸ್ಥಾನದಲ್ಲಿದೆ.

ಸದಾ ಕಳಪೆ ಕಾರ್ಯಕ್ರಮಗಳು, 5-6 ವರ್ಷಗಳಾದರೂ ಮುಗಿಯದ ಸೀರಿಯಲ್ ಗಳು, ನಗು ತರಿಸದ ಕಾಮಿಡಿ ಶೋ ಗಳು.. ಇಂಥ ಕಾರ್ಯಕ್ರಮಗಳನ್ನೇ ನೀಡುತ್ತಿರುವ ವಾಹಿನಿಗಳು ಇತ್ತೀಚಿಗೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವುದು ಕಂಡುಬರುತ್ತಿವೆ. ಅಲ್ಲದೇ ಬರೀ ಹಿಂದಿ ಕಾರ್ಯಕ್ರಮಗಳನ್ನು ನಕಲು ಮಾಡಿ, ತೀರಾ ಸಪ್ಪೆ ಎನಿಸುವ ಕಾರ್ಯಕ್ರಮಗಳನ್ನು ನೀಡುತ್ತಿರುವ ವಾಹಿನಿಗಳಿಂದ ಜನರು ವಿಮುಖರಾಗುತ್ತಿದ್ದಾರೆನ್ನುವುದು ಸ್ಪಷ್ಟ.

ಸದ್ಯ ಸ್ವಲ್ಪಮಟ್ಟಿಗಿನ ಹೊಸತನ ಹೊಂದಿರುವಂಥ ಕಾರ್ಯಕ್ರಮಗಳನ್ನು ನೀಡುತ್ತಿರುವ ಜೀ ಕನ್ನಡ ವಾಹಿನಿ ಸದ್ಯ ನಂ.1 ಪಟ್ಟಕ್ಕೇರಿದ್ದು, ವೀಕ್ಷಕರ ಅಭಿರುಚಿಗೆ ತಕ್ಕಂತೆ, ಹೊಸ ಕಥೆ, ಹೊಸ ವಿಚಾರಗಳನ್ನು ಹೊಂದಿರುವ ಕಾರ್ಯಕ್ರಮಗಳನ್ನು ನೀಡಿದರೆ ವೀಕ್ಷಕರಿಗೆ ಮತ್ತಷ್ಟು ಆಪ್ತವಾಗಬಹುದಷ್ಟೇ.


ಸಂಬಂಧಿತ ಟ್ಯಾಗ್ಗಳು

Entertainment Channels Kannada Channels Reality Shows


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ