ಕುಸಿದು ಬಿದ್ದ ರಾಮ್ ದೇವ್ ಪತಂಜಲಿ

Patanjali

10-09-2019

ಭಾರತದ ನಿಧಾನಗತಿಯ ಆರ್ಥಿಕ ಪ್ರಗತಿ ಹಲವು ಕ್ಷೇತ್ರಗಳಲ್ಲಿ ಹಿನ್ನಡೆಗೆ ಕಾರಣವಾಗಿದೆ. ಮಾರುಕಟ್ಟೆಯಲ್ಲಿರುವ ದೊಡ್ಡ ದೊಡ್ಡ ಕಂಪನಿಗಳ ಬುಡಕ್ಕೆ ಕುತ್ತು ತಂದಿದೆ. ಇದಕ್ಕೆ ಬಾಬಾ ರಾಮ್ ದೇವ್ ಅವರ ಪತಂಜಲಿ ಕೂಡ ಹೊರತಾಗಿಲ್ಲ.

ಜಾಗತಿಕ ಗ್ರಾಹಕ ಸಮೀಕ್ಷೆ ಪ್ರಕಾರ, ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದಲ್ಲಿ ನಗರ ಪ್ರದೇಶಗಳಲ್ಲಿ ಪತಂಜಲಿ ಉತ್ಪನ್ನಗಳ ಬೇಡಿಕೆಯು ಗಣನೀಯ ಪ್ರಮಾಣದಲ್ಲಿ ಕುಸಿದಿದೆ. 2016-17 ರಲ್ಲಿ 10 ಸಾವಿರ ಕೋಟಿ ರೂಗಳಿದ್ದ ಪತಂಜಲಿ ಉತ್ಪನ್ನಗಳ ಮಾರಾಟ, 2017-18 ರಲ್ಲಿ 8100 ಕೋಟಿ ರೂ. ಗಳಾಗಿದ್ದು, 2018-19 ರಲ್ಲಿ 4,700 ಕೋಟಿಗಿಳಿದಿವೆ ಎಂದು ವರದಿಯಾಗಿದೆ.

2016-17 ರಲ್ಲಿ ಬೇಡಿಕೆಯ ಉತ್ತುಂಗಕ್ಕೇರಿದ್ದ ಪತಂಜಲಿ ಉತ್ಪನ್ನಗಳ ಮಾರಾಟವು ಈಗ ನಿಧಾನಗತಿ ತಲುಪಿದೆ. ಹಾಗೆಯೇ ಸಹಜವಾಗಿ ಆದಾಯ ಕೂಡ ಕುಸಿದೆ. ಯೋಜಿತವಲ್ಲದ ವಿಸ್ತರಣೆ, ಕಳಪೆ ಪೂರೈಕೆ ಸರಪಳಿ, ಉತ್ಪನ್ನಗಳ ಅಸಮಂಜಸ ಗುಣಮಟ್ಟ ಹಾಗೂ ವ್ಯಾಪಾರ ಅಭ್ಯಾಸಗಳು ಕೂಡ ಇದಕ್ಕೆ ಕಾರಣ ಎನ್ನುತ್ತಾರೆ ವಿಶ್ಲೇಷಕರು.


ಸಂಬಂಧಿತ ಟ್ಯಾಗ್ಗಳು

Patanjali Sale GDP Baba Ramdev


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ