ಸಂಚಾರಿ ನಿಯಮ ಉಲ್ಲಂಘನೆ : ದೇಶಾದ್ಯಂತ 1.4 ಕೋಟಿ ರೂ.ದಂಡ

Traffic rules violation

06-09-2019

ನವದೆಹಲಿ: ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ದೇಶಾದ್ಯಂತ ಪರಿಷ್ಕತ ದಂಡ ವಿಧಿಸಲಾಗುತ್ತಿದ್ದು ನಗರದಲ್ಲಿ ನಿನ್ನೆ 30 ಲಕ್ಷ ದಂಡ ವಸೂಲಾದರೆ ದೇಶಾದ್ಯಂತ 1.4 ಕೋಟಿ ರೂ. ದಂಡ ವಿಧಿಸಲಾಗಿದೆ.

ಸೆ. 1 ರಿಂದ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುವ ಆದೇಶ ಹೊರ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಈ ಆದೇಶವನ್ನು ಸಂಚಾರಿ ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

ಹರಿಯಾಣ ಮತ್ತು ಒಡಿಶಾ ರಾಜ್ಯಗಳಲ್ಲಿ 4.400 ಚಲನ್‍ಗಳನ್ನು ವಿತರಿಸಿ, 1.4 ಕೋಟಿ ರೂ. ಮೋಟಾರು ವಾಹನ ಕಾಯ್ದೆಯಡಿ ಹೊಸ ನಿಯಮದ ಪ್ರಕಾರ ದಂಡ ವಿಧಿಸಲಾಗಿದೆ ಎಂದು ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಅಂಕಿ-ಅಂಶ ಬಿಡುಗಡೆ ಮಾಡಿದೆ.

ಹರಿಯಾಣದಲ್ಲಿ 363 ಚಲನ್‍ಗಳನ್ನು ವಿತರಿಸಿ, 57,650 ದಂಡ ಸಂಗ್ರಹಿಸಲಾಗಿದೆ. ಇದೇ ರೀತಿ ಒಡಿಶಾದಲ್ಲಿ 46 ವಾಹನಗಳನ್ನು ಜಪ್ತಿಮಾಡಿ 88,90,107 ರೂ. ದಂಡ ಸಂಗ್ರಹಿಸಲಾಗಿದೆ.

ನೂತನ ಕಾಯ್ದೆ ಜಾರಿಗೆ ಬಂದ ಮೊದಲ ದಿನವೇ ರಾಜಧಾನಿ ನವದೆಹಲಿಯಲ್ಲಿ 39 ಸಾವಿರ ಚಾಲಕರಿಗೆ ದಂಡ ವಿಧಿಸಲಾಗಿದೆ. ಉತ್ತರ ಪ್ರದೇಶದಲ್ಲಿ 121, ಛತ್ತೀಸ್‍ಘಡದಲ್ಲಿ 1499, ಜಾರ್ಖಂಡ್ ರಾಜ್ಯದಲ್ಲಿ 1400 ಚಲನ್‍ಗಳನ್ನು ವಿತರಿಸಿ, ಸಂಚಾರಿ ನಿಯಮ ಉಲ್ಲಂಘಿಸಿದ ಚಾಲಕರಿಗೆ ಪೆÇಲೀಸರು ದಂಡ ವಿಧಿಸಿದ್ದಾರೆ.ಗುರ್‍ಗಾಂವ್‍ನಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ದ್ವಿಚಕ್ರ ವಾಹನ ಸವಾರರಿಗೆ 23 ಸಾವಿರ ರೂ. ದಂಡ ವಿಧಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

Traffic Rules Violation Bengaluru Delhi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ