ವಿನಯ್ ಗುರೂಜಿ ಭೇಟಿ ಉದ್ದೇಶಪೂರ್ವಕವಲ್ಲ: ಡಿಕೆಶಿ

DK Shivkumar Statement

03-09-2019

ಜಾರಿ ನಿರ್ದೇಶನಾಲಯದ ಸಮನ್ಸ್ ನನ್ವಯ ವಿಚಾರಣೆಗೆ ತೆರಳುವ ಹಿಂದಿನ ದಿನ ಅನೇಕ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್, ನಗರದಲ್ಲಿ ತಂಗಿದ್ದ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು ಎಂದು ಸುದ್ದಿಯಾಗಿತ್ತು. ಅದರೊಂದಿಗೆ ವಿನಯ್ ಗುರೂಜಿ ಹೇಳಿದ ಭವಿಷ್ಯ ಕೇಳಿ ಡಿಕೆಶಿ ಕಂಗಾಲಾಗಿಬಿಟ್ಟರು ಎಂಬ ಮಾಹಿತಿ ಸುದ್ದಿ ವಲಯದಲ್ಲಿ ಹರಿದಾಡಲಾರಂಭಿಸಿತ್ತು.

ಆದರೆ ‘ನಾನು ವಿನಯ್ ಗುರೂಜಿ ಅವರನ್ನು ಉದ್ದೇಶಪೂರ್ವಕವಾಗಿ ಭೇಟಿ ಮಾಡಲು ಹೋಗಿಲ್ಲ. ಅವರು ನನಗೆ ಯಾವ ಭವಿಷ್ಯವನ್ನೂ ಹೇಳಿಲ್ಲ. ಭೇಟಿ ಆಕಸ್ಮಿಕವಾಗಿತ್ತಷ್ಟೇ’ ಎಂದು ಡಿಕೆಶಿವಕುಮಾರ್ ಹೇಳಿರುವುದು ಸೂಪರ್ ಸುದ್ದಿ ಗಮನಕ್ಕೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಘಟಾನುಘಟಿಗಳೆಲ್ಲ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡುತ್ತಿದ್ದು, ಅದಕ್ಕೆ ಆಧ್ಯಾತ್ಮೇತರ ಅರ್ಥವನ್ನು ಕೊಡಲಾಗುತ್ತಿದೆ. ವಿನಯ್ ಗುರೂಜಿ ಪ್ರಗತಿಪರ ಚಿಂತನೆ ಬಗ್ಗೆ ಪ್ರಶಂಸೆ ಇದ್ದರೂ ಅದರೊಂದಿಗೆ ಈ ಸಣ್ಣ ವಯಸ್ಸಿನಲ್ಲೇ ಅವರು ಅನೇಕ ವಿವಾದಗಳಲ್ಲಿ ಸಿಲುಕಿ ಹಾಕಿಕೊಳ್ಳುತ್ತಿರುವುದು ಈ ರಾಜಕೀಯ ನಂಟಿನ ಕಾರಣದಿಂದಲೇ ಎಂದು ಅನುಮಾನಿಸಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

DK Shivkumar ED Vinay Guruji Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ