ಚಿತ್ರ ವಿಮರ್ಶೆ : ಸಾಹೋ

Film review

31-08-2019

ಇಡೀ ಭಾರತದ ಚಿತ್ರರಂಗ ಎದುರು ನೋಡುತ್ತಿದ್ದ ನಟ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ರಿಲೀಸ್ ಆಗಿದ್ದು ಚಿತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಯುವ ನಿರ್ದೇಶಕ ಸುಜಿತ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಬರೋಬ್ಬರಿ 350 ಕೋಟಿ ಬಜೆಟ್ ಸಿನಿಮಾ ಇದಾಗಿದೆ.

ಪ್ರಭಾಸ್ ಗೆ ಜೋಡಿಯಾಗಿ ಬಾಲಿವುಡ್ ನ ಶೃದ್ಧಾ ಕಪೂರ್ ನಟಿಸಿದ್ದು, ಜಾಕಿಶ್ರಾಫ್, ಕನ್ನಡದ ನಟರಾದ ಪ್ರಕಾಶ್‌ ಬೆಳವಾಡಿ ಮತ್ತು ಶರತ್‌ ಲೋಹಿತಾಶ್ವ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್‌ ಇಲಾಖೆ ಮತ್ತು ಭೂಗತ ಜಗತ್ತಿನ ಡಾನ್‌ಗಳ ನಡುವಿನ ಕಣ್ಣಾ ಮುಚ್ಚಾಲೆ ಆಟವೇ ಸಾಹೋ ಸಿನಿಮಾದ ಕಥಾವಸ್ತು.

ಚಿತ್ರದ ಪ್ಲಸ್ ಪಾಯಿಂಟ್: ನಟ ಪ್ರಭಾಸ್ ನಟನೆ, ಆ್ಯಕ್ಷನ್ ಸೀಸ್ ಗಳು ಚೆನ್ನಾಗಿವೆ, ಫೋಟೋಗ್ರಫಿ ಕಣ್ಮನ ತಣಿಸುವಂತಿದೆ. ಲೊಕೇಶನ್, ಸೆಟ್, ಮೇಕಿಂಗ್ ಹಾಗೂ ನಟ-ನಟಿಯರ ಕಾಸ್ಟ್ಯೂಮ್ ಹೈ ಸ್ಟ್ಯಾಂಡರ್ಡ್ ನಲ್ಲಿದೆ.

ಚಿತ್ರದ ಮೈನಸ್ ಪಾಯಿಂಟ್: ಚಿತ್ರ ಕಥಾವಸ್ತುವನ್ನು ನೋಡುಗರ ಮುಂದಿಡುವಲ್ಲಿ ನಿರ್ದೇಶಕ ಸುಜಿತ್ ಸೋತಿದ್ದಾರೆ. ಪ್ರಭಾಸ್ ಅವರು ಅಭಿಮಾನಿಗಳ ನಿರೀಕ್ಷೆ ಮುಟ್ಟಿಲ್ಲ. ಪ್ರಭಾಸ್ ಡೈಲಾಗ್ ಡೆಲಿವರಿ ಸೌತ್ ಆಕ್ಸೆಂಟ್ ನಲ್ಲಿದೆ. ಶ್ರದ್ಧಾ ಕಪೂರ್ ಸಿಬಿಐ ಆಫೀಸರ್ ಪಾತ್ರಕ್ಕೆ ಜೀವ ತುಂಬಿಲ್ಲ. ವಿಎಫ್ ಎಕ್ಸ್ ಕೂಡ ತೀರಾ ಸಾಮಾನ್ಯವಾಗಿದೆ. ಚಿತ್ರದಲ್ಲಿ ಎಮೋಷನ್ಸ್ ಹಾಗೂ ಎಂಟರ್ ಟೇನ್ ಮೆಂಟ್ ಇಲ್ಲವೇ ಇಲ್ಲ. ಹಾಡುಗಳು ಸಾಮಾನ್ಯವಾಗಿದೆ.

ಒಟ್ಟಾರೆ ಚಿತ್ರದ ಮೇಕಿಂಗ್, ಆ್ಯಕ್ಷನ್ ಸೀನ್ ಗಳಿಗೆ ಪ್ರೇಕ್ಷಕರು ಸಿಳ್ಳೆ ಹೊಡೆದಿದ್ದಾರೆ. ಕೊಟ್ಟ ದುಡ್ಡಿಗೆ ಮೋಸವಿಲ್ಲ ಎನ್ನುತ್ತಿದ್ದಾರೆ ಜನರು.

 


ಸಂಬಂಧಿತ ಟ್ಯಾಗ್ಗಳು

Sahoo Bollywood Prabhas Shraddha Kapoor


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ