ಕ್ಯಾಬ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ: ಓರ್ವ ಸಾವು

Accident

28-08-2019

ಬೆಂಗಳೂರು: ಮೇಲ್ಸೇತುವೆ ಸೇತುವೆ ರಸ್ತೆಯಲ್ಲಿ ನಿರ್ಲಕ್ಷ್ಯತನದಿಂದ ನಿಲ್ಲಿಸಿದ್ದ ಕ್ಯಾಬ್‍ಗೆ ಹಿಂದಿನಿಂದ ಬಂದ ಆಟೋ ಡಿಕ್ಕಿ ಹೊಡೆದು ಪ್ರಾಯಾಣಿಕರೊಬ್ಬರು ಮೃತಪಟ್ಟು ಚಾಲಕ ಸೇರಿ ಮೂವರು ಗಾಯಗೊಂಡಿರುವ ಘಟನೆ ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರು ರಸ್ತೆಯ ಇನಾಯಿತ್‍ವುಲ್ಲಾ (60)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಗಾಯಗೊಂಡಿರುವ ಅವರ ಪುತ್ರಿ ಸಬಿಯಾ, ಅಳಿಯ ರಂಜಾನ್ ಹಾಗೂ ಆಟೋ ಚಾಲಕ ನಯಾಜ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಳಿಯ ರಂಜಾನ್‍ಗೆ ಕಾಲು ಮುರಿದಿದ್ದರಿಂದ ಆಯುರ್ವೇದಿಕ್ ಚಿಕಿತ್ಸೆ ಪಟ್ಟು ಹಾಕಿಸಿಕೊಳ್ಳಲು ಮಂಗಳವಾರ ಇನಾಯಿತ್‍ವುಲ್ಲಾ ಅವರು ಮಗಳು ಸಬಿಯಾ ಜತೆ ನಯಾಜ್‍ನ ಆಟೋದಲ್ಲಿ ನೆಲಮಂಗಲದ ವೆಂಕಟಮ್ಮಹಳ್ಳಿಗೆ ಹೋಗಿದ್ದರು.

ಚಿಕಿತ್ಸೆ ಪಡೆದು ಮಧ್ಯಾಹ್ನ 1.30ರ ವೇಳೆ ಮನೆಗೆ ಪೀಣ್ಯದ ಮೇಲ್ಸೇತುವೆ ರಸ್ತೆಯಲ್ಲಿ ಬರುತ್ತಿದ್ದಾಗ ಮಾರ್ಗಮಧ್ಯೆ ಜಾಲಹಳ್ಳಿ ಕ್ರಾಸ್ ಬಳಿ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ನಿಲ್ಲಿಸಿದ್ದ ಕ್ಯಾಬ್‍ಗೆ ಡಿಕ್ಕಿ ಹೊಡೆದಿದ್ದಾರೆ.ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಇನಾಯಿತ್‍ವುಲ್ಲಾ ಅವರನ್ನು ಕೂಡಲೇ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 3.30ರ ವೇಳೆ ಮೃತಪಟ್ಟಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯ ಸಂಚಾರ ಪೆÇಲೀಸರು ನಿರ್ಲಕ್ಷ್ಯದಿಂದ ಕ್ಯಾಬ್ ನಿಲ್ಲಿಸಿದ್ದ ಚಾಲಕನ ಮೇಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident Peenya Cab Auto


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ