ಲಾಸ್ ಎಂಜಲೀಸ್ ನಲ್ಲಿ ಮನೆ ಹುಡುಕುತ್ತಿದ್ದಾರಂತೆ ಪ್ರಭಾಸ್!


13-08-2019 226

ಟಾಲಿವುಡ್ ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ ಗಾಗಿ ಕನ್ಯೆಯರು ಸಾಲುಗಟ್ಟಿದ್ದರೂ ಪ್ರಭಾಸ್ ಮಾತ್ರ ನೋ ಎನ್ನುತ್ತಿದ್ದಾರಂತೆ. ಅದಕ್ಕೆ ಕಾರಣ ದೇವಸೇನಾ. ಬಾಹುಬಲಿ ಪ್ರಭಾಸ್ ಹಾಗೂ ದೇವಸೇನಾ ಅನುಷ್ಕಾ ಶೆಟ್ಟಿ ಈ ವರ್ಷದ ಕೊನೆಯಲ್ಲಿ ಮದುವೆಯಾಗ್ತಾರೆ ಅನ್ನೋ ಗಾಸಿಪ್ ಇದೆ. ಅದಕ್ಕೆ ಪೂರಕವೆಂಬಂತೆ ಪ್ರಭಾಸ್ ಹಾಗೂ ಅನುಷ್ಕಾ ಲಾಸ್ ಎಂಜಲೀಸ್ ನಲ್ಲಿ ಮನೆ ಹುಡುಕುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಸದ್ಯ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಸಾಹೋ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಪ್ರಭಾಸ್, ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅನುಷ್ಕಾಗಾಗಿ ಸಾಹೋ ಸ್ಪೆಷಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿದ್ದರಂತೆ. ಸುಜಿತ್ ನಿರ್ದೇಶನದ ಸಾಹೋ ಚಿತ್ರದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಶೃದ್ಧಾ ಕಪೂರ್ ನಟಿಸಿದ್ದು ಇದೇ ತಿಂಗಳು 30 ರಂದು ಬಿಡುಗಡೆಯಾಗಲಿದೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Prabhas Tollywood Anushka Shetty Bahubali