ಯಡಿಯೂರಪ್ಪ ಸರ್ಕಾರ ಸದ್ಯಕ್ಕೆ ಸೇಫ್!


29-07-2019 215

ಬೆಂಗಳೂರು: ರಾಜ್ಯ ರಾಜಕಾರಣ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಇಂದು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. 17 ಮಂದಿ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದರಿಂದ ಬಿಜೆಪಿ ಮ್ಯಾಜಿಕ್ ನಂಬರ್ ಈಗಾಗಲೇ ಹೊಂದಿದೆ.
ಅಧಿವೇಶನ ಆರಂಭಕ್ಕೂ ಮುನ್ನ ಯಡಿಯೂರಪ್ಪ ಸಂಜಯ ನಗರದ ಆಂಜನೇಯ ದೇವಸ್ಥಾನ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಈ ಸಭೆಯಲ್ಲಿ ಎಲ್ಲಾ ಶಾಸಕರು ಸಕ್ರಿಯವಾಗಿ ಕಲಾಪದಲ್ಲಿ ಪಾಲ್ಗೊಳ್ಳಬೇಕು. ಪ್ರತಿ ಪಕ್ಷಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದು ಕಿವಿಮಾತು ಹೇಳಿದರು.
ಸದ್ಯ ಬಿಜೆಪಿ , ಮುಳಬಾಗಿಲು ಪಕ್ಷೇತರ ಅಭ್ಯರ್ಥಿ ನಾಗೇಶ್ ಬೆಂಬಲದೊಂದಿಗೆ 106 ಸ್ಥಾನ ಹೊಂದಿದೆ. 17 ಶಾಸಕರ ಅನರ್ಹತೆಯಿಂದ ಸದನದ ಬಲಾಬಲ 208ಕ್ಕೆ ಇಳಿದಿದೆ. ಮ್ಯಾಜಿಕ್ ನಂಬರ್ 105ಕ್ಕೆ ಇಳಿದಿದೆ. ಬಹುತೇಕ ಬಿಜೆಪಿ ಬಹುಮತ ವಿಶ್ವಾಸ ಸಾಬೀತು ಪಡಿಸಲಿದ್ದು ಸದನದ ಬಳಿಕ ಯಡಿಯೂರಪ್ಪ ಸಚಿವ ಸ್ಥಾನದ ಪಟ್ಟಿ ಹಿಡಿದು ಹೈ ಕಮಾಂಡ್ ಒಪ್ಪಿಗೆಗೆ ದೆಹಲಿಗೆ ಹಾರಲಿದ್ದಾರೆ ಎನ್ನಲಾಗಿದೆ. 17 ಅನರ್ಹ ಶಾಸಕರಿಗೆ ಇದೀಗ ಪೀಕಲಾಟ ಶುರುವಾಗಿದ್ದು ಇತ್ತ ಅಧಿಕಾರವು ಇಲ್ಲ. ಶಾಸಕ ಸ್ಥಾನವು ಇಲ್ಲದಾಗಿದೆ. ಸ್ಪೀಕರ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಬಿಜೆಪಿ ಮಾತ್ರ ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದಂತಾಗಿದೆ. ಬಿಜೆಪಿಗೆ ಸಚಿವ ಸ್ಥಾನ ಹಂಚಿಕೆ ಸದ್ಯಕ್ಕೆ ಸುಗಮವಾಗಿದೆ.
ಇನ್ನು ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆಯಾಗುವ ಸಾಧ್ಯತೆ ಇದೆ. ಉಪನಾಯಕರಾಗಿ ಪರಮೇಶ್ವರ್ ಆಯ್ಕೆ ಸಾಧ್ಯತೆ ಇದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

BS Yediyurappa BJP Siddaramaiah Session