ತಪ್ಪು ತಿಳಿವಳಿಕೆಯಿಂದ ಉಚ್ಚಾಟಿಸಲಾಗಿದೆ: ಎನ್.ಮಹೇಶ್


24-07-2019 165

ಬೆಂಗಳೂರು: ಪಕ್ಷದ ಉಸ್ತುವಾರಿ ಅಶೋಕ್ ಸಿದ್ಧಾರ್ಥ್ ಅವರು ವಿಶ್ವಾಸಮತದ ವೇಳೆ ದೂರ ಇರಲು, ತಟಸ್ಥವಾಗಿರಲು ಮತ್ತು ಯಾವುದೇ ಪಕ್ಷವನ್ನು ಬೆಂಬಲಿಸದಿರಲು ಸೂಚನೆ ನೀಡಿದ್ದರು ಎಂದು ಕೊಳ್ಳೇಗಾಲದಿಂದ ಶಾಸಕರಾಗಿ ಆಯ್ಕೆಯಾಗಿ ಬಿಎಸ್‍ಪಿ ಪಕ್ಷದಿಂದ ಉಚ್ಚಾಟಿತರಾಗಿರುವ ಎನ್ ಮಹೇಶ್ ಹೇಳಿದರು. ಇದೇ ನಿರ್ದೇಶನವನ್ನು ನನಗೆ ನೀಡಲಾಗಿತ್ತು. ಅದರ ಆಧಾರದ ಮೇಲೆ ನಾನು ಗೈರಾಗಿದ್ದೆ. ನಾನು ಮಾಯಾವತಿಯವರ ಆದೇಶವನ್ನು ಉಲ್ಲಂಘಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಹೈಕಮಾಂಡ್ ನಿರ್ದೇಶನದ ಪ್ರಕಾರ ನಾನು ವಿಶ್ವಾಸಮತದಿಂದ ದೂರನಾಗಿ ತಟಸ್ಥನಾಗಿ ಉಳಿದೆ. ನಾನು ಯಾವುದೇ ಆದೇಶವನ್ನು ಉಲ್ಲಂಘಿಸಿಲ್ಲ. ಇದರಿಂದ (ಉಚ್ಚಾಟನೆಯಿಂದ) ನನಗೆ ಅಚ್ಚರಿಯಾಗಿದೆ. ನಾನು ಇದುವರೆಗೆ ಪಕ್ಷದ ನಾಯಕಿ (ಮಾಯಾವತಿ) ಜೊತೆ ಮಾತಾಡಿಲ್ಲ. ನಾನು ಒಂದು ವಾರದಿಂದ ಬೆಂಗಳೂರಿನಿಂದ ದೂರ ಇದ್ದೆ. ಇಂದು ಮುಂಜಾನೆ ನನ್ನನ್ನು ಉಚ್ಚಾಟಿಸಿರುವ ವಿಚಾರ ತಿಳಿಯಿತು ಎಂದು ಅವರು ಹೇಳಿದರು.

ಪ್ರಾಯಶಃ ಇದು (ಉಚ್ಚಾಟನೆ) ತಪ್ಪು ತಿಳಿವಳಿಕೆಯಿಂದ ಆಗಿರಬಹುದು. ಆದರೆ, ಇದು ತಾತ್ಕಾಲಿಕ. ಎಲ್ಲವೂ ಸರಿಯಾಗುತ್ತದೆ. ನಾನು ಬಿಎಸ್‍ಪಿಯಲ್ಲೇ ಇರುತ್ತೇನೆ ಎಂದು ಅವರು ತಿಳಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

N Mahesh MLA Mayavathi BSP