‘ವಿಪ್ ವಿಚಾರದಲ್ಲಿ ಮೊದಲು ಸ್ಪಷ್ಟನೆ ಸಿಗಲಿ’


18-07-2019 204

ಬೆಂಗಳೂರು: ಸುಪ್ರಿಂಕೋರ್ಟ್ ಶಾಸಕಾಂಗದ ಹಕ್ಕನ್ನು ಮೊಟಕುಗೊಳಿಸಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿದೆ. ವಿಪ್ ವಿಚಾರದಲ್ಲಿ ಸೂಕ್ತ ಸ್ಪಷ್ಟನೆ ನೀಡುವವರೆಗೂ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರ ಮೇಲೆ ನಮಗೆ ಹಕ್ಕು ಇದೆಯೋ ಇಲ್ಲವೋ ಎಂಬುದನ್ನು ಕೋರ್ಟ್ ಇನ್ನೂ ಸ್ಪಷ್ಟಪಡಿಸಿಲ್ಲ. ರಾಜಕೀಯ ಪಕ್ಷದ ಚಿಹ್ನೆಯಡಿ ಗೆಲುವು ಸಾಧಿಸಿದವರಿಗೆ ವಿಪ್ ಅನ್ವಯ ಆಗುವುದಿಲ್ಲ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಶಾಸಕರ ಮೇಲೆ ವಿಪ್ ಜಾರಿಗೊಳಿಸುವುದು ಸರಿಯಲ್ಲ ಎಂದು ಹೇಳುವುದು ಸಂವಿಧಾನದ 10 ನೇ ಶೆಡ್ಯೂಲ್ ಗೆ ಚ್ಯುತಿ ತಂದಂತಾಗುತ್ತದೆ. ರಾಜಕೀಯ ಪಕ್ಷದ ಶಾಸಕಾಂಗದ ಹಕ್ಕನ್ನು ಕಸಿದಂತೆ ಆಗಿದೆ. ಹೀಗಾಗಿ ಸುಪ್ರಿಂಕೋರ್ಟ್ ಸೃಷ್ಟಿಸಿರುವ ಸಾಂವಿಧಾನಿಕ ಬಿಕ್ಕಟ್ಟು ಸರಿಯಾಗಬೇಕು. ಅಲ್ಲಿಯವರೆಗೂ ವಿಶ್ವಾಸಮತ ಯಾಚನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗುವುದು ಸರಿಯಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Session KPCC Trust Vote Dinesh Gundurao