ಇಂದು ಅಮರನಾಥ ಯಾತ್ರೆ ಬಂದ್.. ಕಾರಣ ಏನು?


13-07-2019 247

ಪ್ರತಿವರ್ಷ ಲಕ್ಷಾಂತರ ಜನ ಯಾತ್ರಿಕರು ಪವಿತ್ರ ಅಮರನಾಥ ಯಾತ್ರೆ ಕೈಗೊಳ್ಳುತ್ತಾರೆ. ಆದರೆ ಇಂದು ಕಾಶ್ಮೀರ ವ್ಯಾಲಿಯಿಂದ ಜಮ್ಮುವಿಗೆ ಹೋಗುವ ದಾರಿಯನ್ನು ಬಂದ್ ಮಾಡಲಾಗಿದ್ದು, ಇವತ್ತೊಂದು ದಿನ ಅಮರನಾಥ ಯಾತ್ರೆಯನ್ನು ಬಂದ್ ಮಾಡಲಾಗಿದೆ. ಇದಕ್ಕೆ ಪ್ರಮುಖ ಕಾರಣ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳು ಬಂದ್ ಗೆ ಕರೆ ನೀಡಿ ಪ್ರತಿಭಟನೆ ನಡೆಸುತ್ತಿದ್ದು, ಯಾವುದೇ ಅನಾಹುತ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಯಾತ್ರೆಯನ್ನು ಬಂದ್ ಮಾಡಿದ್ದಾರೆ. ಜುಲೈ 1 ರಿಂದ ಆರಂಭವಾಗಿರುವ ಯಾತ್ರೆಯಲ್ಲಿ ಸುಮಾರು 1.5 ಲಕ್ಷ ಜನರು ಪಾಲ್ಗೊಂಡಿದ್ದಾರೆ. ಅಗಸ್ಟ್ 15 ರಂದು ಯಾತ್ರೆ ಮುಕ್ತಾಯಗೊಳ್ಳಲಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Amarnath Yatra Kashmir Jammu Hindu Yatra