ಜನರನ್ನು ಥಳಿಸಲು ರಾಮನಾಮ ಬಳಕೆಯಾಗುತ್ತಿದೆ: ಅಮರ್ತ್ಯ ಸೇನ್


06-07-2019 123

ಕೊಲ್ಕೊತ್ತಾ: ನಾನು ಈ ಜೈಶ್ರೀರಾಂ ಘೋಷಣೆಯನ್ನು ಕೇಳಿಲ್ಲ. ಇದೀಗ ಇದು ಜನರನ್ನು ಥಳಿಸಲು ಬಳಕೆಯಾಗುತ್ತಿದೆ ಎಂದು  ನೊಬೆಲ್  ಪ್ರಶಸ್ತಿ  ಪುರಸ್ಕೃತ  ಅರ್ಥಶಾಸ್ತ್ರಜ್ಞ  ಅಮರ್ತ್ಯ  ಸೇನ್ ಹೇಳಿದರು.  ಇದು  (ಜೈಶ್ರೀರಾಂ ಹೆಸರಿನಲ್ಲಿ ಹಲ್ಲೆನಡೆಸುವುದು) ಬೆಂಗಾಳಿ ಸಂಸ್ಕೃತಿಯೊಂದಿಗೆ ಸಂಬಂಧವಿಲ್ಲ. ಈಗಿನ  ದಿನಗಳಲ್ಲಿ ರಾಮನವಮಿಯನ್ನುಕೊಲ್ಕೊತ್ತಾದಾದ್ಯಂತ ಆಚರಿಸಲಾಗುತ್ತಿದೆ. ಇದನ್ನು ನಾನು ಈ ಹಿಂದೆ  ಕೇಳಿರಲಿಲ್ಲ ಎಂದರು.

ನಂತರ ಮಾತನಾಡಿದ ಅವರು, ನಿನ್ನ ಇಷ್ಟದ ದೇವತೆ ಯಾರು?  ಎಂದು  ನಾನು ನನ್ನ 4  ವರ್ಷದ  ಮೊಮ್ಮಗುವನ್ನುಕೇಳಿದೆ. ಅವಳು ‘ದುರ್ಗಾ ಮಾತೆ’ ಎಂದಳು.  ದುರ್ಗಾ ಮಾತೆಯ  ಮಹತ್ವವನ್ನು  ರಾಮನವಮಿಯೊಂದಿಗೆ ಹೋಲಿಸಬಾರದು ಎಂದು  ಅವರು  ಇದೇ  ವೇಳೆ ಅಭಿಪ್ರಾಯಪಟ್ಟರು.

ಈ ಕುರಿತು ಪ್ರತಿಕ್ರಿಯಿಸಿರುವ ಪ.ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ಅಮರ್ತ್ಯ ಸೇನ್  ಅವರಿಗೆ ಬಂಗಾಳದ ಅರಿವಿಲ್ಲ. ಬಂಗಾಳ ಮತ್ತು ಭಾರತೀಯ ಸಂಸ್ಕೃತಿ ಕುರಿತು ಅವರಿಗೇನು ಗೊತ್ತು? ಜೈಶ್ರೀರಾಂ ಮಂತ್ರವನ್ನು ಪ್ರತಿಹಳ್ಳಿಯಲ್ಲೂ ಪಠಿಸಲಾಗುತ್ತಿದೆ. ಇದೀಗ ಇಡೀ ಬಂಗಾಳದಲ್ಲಿ ಘೋಷಣೆ ಕೂಗಲಾಗುತ್ತಿದೆ ಎಂದಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Amartya sen Jai Shree Ram West bengal Maa durga