ಬಿಜೆಪಿ ಎಂಪಿ ರಾಮ್ ಶಂಕರ್ ಭದ್ರತಾ ಸಿಬ್ಬಂದಿಯಿಂದ ಹಲ್ಲೆ


06-07-2019 159

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷರ ಭದ್ರತಾ ಸಿಬ್ಬಂದಿಯಿಂದ ಹಲ್ಲೆ

ಲಖ್ನೋ: ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ರಾಂಶಂಕರ್ ಕಟೇರಿಯಾ ಭದ್ರತಾ ಸಿಬ್ಬಂದಿ, ಉತ್ತರಪ್ರದೇಶದ ಆಗ್ರಾದ ಟೋಲ್ ಪ್ಲಾಜಾ ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕಿಳಿದ ಕಟೇರಿಯಾ ಅವರ ಭದ್ರತಾ ಸಿಬ್ಬಂದಿ, ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ವಾಹನದಲ್ಲಿ ಕಟೇರಿಯಾ ಕೂಡ ಹಾಜರಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಆದರೆ, ಈ ಕುರಿತು ತಡವಾಗಿ ಪ್ರತಿಕ್ರಿಯಿಸಿರುವ ಕಟೇರಿಯಾ, ನನ್ನ ಭದ್ರತಾ ಸಿಬ್ಬಂದಿ ಟೋಲ್ ಪ್ಲಾಜಾ ಮೇಲೆ ದಾಳಿ ನಡೆಸಿಲ್ಲ. ಮೊದಲು ಅವರು ನಮ್ಮ ಜನರ ಮೇಲೆ ದಾಳಿ ನಡೆಸಿದರು. ಟೋಲ್ ಸಿಬ್ಬಂದಿಗೆ ನನ್ನೊಂದಿಗೆ ಇರುವ ಬೆಂಗಾವಲು ವಾಹನಗಳ ಕುರಿತು ತಿಳಿದಿರಲಿಲ್ಲ. ನನ್ನ ಕಾರಿನೊಂದಿಗೆ ಕೆಲವು ವಾಹನಗಳು ತಪ್ಪಿಸಿಕೊಂಡು ಹೋಗುತ್ತಿವೆ ಎಂದು ಅವರು ಭಾವಿಸಿದರು. ನನ್ನ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದು ಕೇವಲ ಸ್ವಯಂ ರಕ್ಷಣೆಗೆ ಎಂದು ಹೇಳಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Ram Shankar Katheria MP BJP UP