ಧೋನಿ ನಿಧಾನ ಗತಿಯ ಆಟ ಬೆಂಬಲಿಸಿದ ತೆಂಡುಲ್ಕರ್


03-07-2019 352

ನಿನ್ನೆ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆದ ಭಾರತ – ಬಾಂಗ್ಲಾ ಪಂದ್ಯದಲ್ಲಿ 33 ಎಸೆತಗಳಿಗೆ 35 ರನ್ ಗಳಿಸಿದ ಕಾರಣಕ್ಕೆ ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗೆ ಗುರಿಯಾಗಿದ್ದರು. ಆದರೆ, ಈ ಮಾಜಿ ನಾಯಕನಿಗೆ ಮತ್ತೊಮ್ಮ ಮಾಜಿ ನಾಯಕ ಸಚಿನ್ ತೆಂಡುಲ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಧೋನಿ ಆಟದ ಕುರಿತು ಪ್ರತಿಕ್ರಿಯಿಸಿರುವ ಸಚಿನ್, ನನ್ನ ಪ್ರಕಾರ ಇದು ಪ್ರಮುಖವಾದ ಇನ್ನಿಂಗ್ಸ್ ಮತ್ತು ಧೋನಿಯವರು ತಂಡಕ್ಕೆ ಯಾವುದು ಅಗತ್ಯವೋ ಅದನ್ನೇ ಮಾಡಿದ್ದಾರೆ. ಒಂದು ವೇಳೆ ಅವರು 50ನೇ ಓವರ್ ವರೆಗೆ ಸ್ಕ್ರೀಜ್‍ನಲ್ಲಿದ್ದಿದ್ದರೆ, ಅವರೊಂದಿಗೆ ಇರುವ ಇತರರಿಗೆ ಅವರು ನೆರವು ನೀಡುತ್ತಿದ್ದರು. ಅವರಿಂದ ಇದನ್ನೇ ನಿರೀಕ್ಷಿಸಲಾಗುತ್ತದೆ ಮತ್ತು ಅವರು ಅದನ್ನು ಮಾಡಿದ್ದಾರೆ ಎನ್ನುವ ಮೂಲಕ ಧೋನಿಯವರನ್ನು ಸಮರ್ಥಿಸಿದ್ದಾರೆ. ಅಲ್ಲದೇ, ಧೋನಿಯವರಿಗೆ ತಂಡವೇ ಎಲ್ಲಕ್ಕಿಂತ ಮುಖ್ಯ. ತಂಡಕ್ಕೆ ಏನೆಲ್ಲ ಅಗತ್ಯವಿದೆಯೋ ಅದನ್ನೇ ಅವರು ಸಮರ್ಥವಾಗಿ ಎಂದು ಹೇಳಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

M S Dhoni Cricket Sachin Tendulkar Bangladesh