ಇಂದಿನಿಂದ ವರ್ಬೆಟಲ್ ಚರ್ಚಾಸ್ಪರ್ಧೆ ಆರಂಭ


03-07-2019 258

ವರ್ಬೆಟಲ್ ಪ್ರತಿಷ್ಠಾನ ನಡೆಸುವ ರಾಜ್ಯಮಟ್ಟದ ಚರ್ಚಾಸ್ಪರ್ಧೆ ಇಂದಿನಿಂದ ಆರಂಭವಾಗಿದೆ. ಮೂರು ಹಂತಗಳಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ 8 ರಿಂದ 12 ರ ವಯೋಮಿತಿಯವರೆಗೆ ಬಿಗಿನರ್, 12 ರಿಂದ 16 ವರ್ಷ ವಯೋಮಿತಿಯವರೆಗೆ ಜೂನಿಯರ್ ಹಾಗೂ 16 ರಿಂದ 24 ವರ್ಷದವರಿಗೆ ಸೀನಿಯರ್ ಎಂದು ವಿಭಾಗಿಸಲಾಗಿದ್ದು, ಇಂಗ್ಲೀಷ್ ನಲ್ಲಿ ಚರ್ಚೆ ನಡೆಸಬೇಕಿದೆ. ಕನ್ನಡದ ವಿದ್ಯಾರ್ಥಿಗಳು 12 ರಿಂದ 16 ವರ್ಷದವರ ವಿಭಾಗದಲ್ಲಿ ಪಾಲ್ಗೊಳ್ಳಬಹುದು.

ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಮಂಗಳೂರು ಮತ್ತು ಮೈಸೂರಿನಲ್ಲಿ ವಲಯ ಮಟ್ಟದ ಸ್ಪರ್ಧೆ ನಡೆಯಲಿದೆ. ವರ್ಬೆಟಲ್ ಬಿಗಿನರ್ ಸ್ಪರ್ಧೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಆರಂಭವಾಗಿದೆ.

ಶಾಲೆಗಳು ಸ್ಪರ್ಧಿಗಳ ತಂಡ ರಚಿಸಿ ಸ್ಪರ್ಧೆಗೆ ಕಳುಹಿಸಬಹುದು. ಇಲ್ಲವೇ, ಆಸಕ್ತ ವಿದ್ಯಾರ್ಥಿಗಳು ತಂಡ ಮಾಡಿಕೊಂಡು ಶಾಲೆಯ ಅನುಮತಿ ಪಡೆದು ಭಾಗವಹಿಸಬಹುದು. www.verbattle.com ಮೂಲಕ ಆನ್ ಲೈನ್ ನಲ್ಲಿಯೂ ಹೆಸರು ನೋಂದಣಿ ಮಾಡಿಕೊಳ್ಳಬಹುದು.

ಎಲ್ಲ ವಿಭಾಗದ ಸ್ಪರ್ಧೆಯ ವಿಜೇತರಿಗೆ 3 ಲಕ್ಷ ರೂ. ವರೆಗೆ ನಗದು ಬಹುಮಾನ ನೀಡಲಾಗುತ್ತದೆ. ಇದು ಚರ್ಚಾಸ್ಪರ್ಧೆಯ ವಿಜೇತರಿಗೆ ನೀಡುವ ಗರಿಷ್ಠ ನಗದು ಬಹುಮಾನವಾಗಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥ ದೀಪಕ್ ತಿಮ್ಮಯ ತಿಳಿಸಿದ್ದಾರೆ. ಮಾಹಿತಿಗೆ 9886464641 ಅಥವಾ info@verbattle.com ಸಂಪರ್ಕಿಸಬಹುದು. ಚರ್ಚಾಸ್ಪರ್ಧೆ ಆಗಸ್ಟ್ 2 ರವರೆಗೆ ನಡೆಯಲಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Verbattle Competition Deepak Timmaiah Debate