ಈ ಟಿಪ್ಸ್ ಪಾಲಿಸಿದ್ರೆ ನೀವು ಸಣ್ಣಗಾಗೋದು ಖಚಿತ !


02-07-2019 233

ಇಂದಿನ ಕಾಲಮಾನದಲ್ಲಿ ಸ್ಥೂಲಕಾಯ ಎನ್ನುವುದು ಎಲ್ಲರಲ್ಲೂ ಕಂಡುಬರುವ ಸಮಸ್ಯೆ. ಇಂದಿನ ಜೀವನ ಶೈಲಿಯೇ ಅದಕ್ಕೆ ಮುಖ್ಯ ಕಾರಣವಾದರೂ ತೂಕ ಇಳಿಕೆ ಮಾಡಿಕೊಳ್ಳೋಕೆ ಹಲವರು ಹಲವು ವಿಧದಲ್ಲಿ ಪ್ರಯತ್ನ ಪಡುತ್ತಿರುತ್ತಾರೆ. ಆದರೆ ಆಹಾರ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿದಲ್ಲಿ ಖಂಡಿತ ನೀವು ಸಣ್ಣಗಾಗಬಹುದು.

ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ. ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಯಂಕಾಲದ ಬಳಿಕ ದೇಹದಲ್ಲಿ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ಸಾಗುವುದರಿಂದ ಆದಷ್ಟು ರಾತ್ರಿ 7 ಗಂಟೆಯ ನಂತರ ಉಪ್ಪಿನ ಸೇವನೆ ನಿಲ್ಲಿಸಬೇಕು.

ಸಿಹಿ ಪದಾರ್ಥ ಹಾಗೂ ಪ್ಯಾಕೆಟ್ ಫುಡ್ ಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇದು ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೇ ಸ್ಥೂಲಕಾಯವನ್ನು ಹೆಚ್ಚಿಸುತ್ತದೆ.

ಸಂಸ್ಕರಿಸಿದ ಆಹಾರದೆಣ್ಣೆಯ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು.  

ಫೈಬರ್ ಹಾಗೂ ಪ್ರೋಟೀನ್ ಹೆಚ್ಚಿರುವ ಸೊಪ್ಪು ತರಕಾರಿ ಬಳಕೆ ಹೆಚ್ಚು ಮಾಡಬೇಕು. ಇವು ತೂಕ ಇಳಿಕೆಗೆ ನೆರವಾಗುತ್ತವೆ.

ನೀರಿನ ಸೇವನೆಯನ್ನು ಹೆಚ್ಚು ಮಾಡಬೇಕು. ದಿನದಲ್ಲಿ 4-5 ಲೀಟರ್ ನೀರು ಕುಡಿದಲ್ಲಿ ಜೀರ್ಣಕ್ರಿಯೆ ಸುಲಭವಾಗುತ್ತದೆಯಲ್ಲದೇ, ದೇಹದಲ್ಲಿರುವ ಕಲ್ಮಷ ಹೊರಗೆ ಹೋಗುತ್ತದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Diet Weight Loss Fast Food Oil