ಸರಿಯಾಗಿ ನಿದ್ದೆ ಮಾಡದೇ ಹೋದರೆ ಮರೆಗುಳಿಯಾದೀರಿ!


29-06-2019 204

ಸರಿಯಾಗಿ ನಿದ್ದೆ ಮಾಡದೇ ಹೋದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಆದರೆ ಹೊಸ ಅಧ್ಯಯನದ ಪ್ರಕಾರ ಚೆನ್ನಾಗಿ ನಿದ್ದೆ ಮಾಡದೇ ಇದ್ದರೆ ವಯಸ್ಸಾದ ಬಳಿಕ ಮರೆಗುಳಿ ಕಾಯಿಲೆ ನಿಮ್ಮನ್ನು ಆವರಿಸೀತು.

50 ರಿಂದ 60ನೇ ವಯಸ್ಸಿನಲ್ಲಿ ಸರಿಯಾಗಿ ನಿದ್ದೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಮರೆಗುಳಿ ಖಾಯಿಲೆ ಬರೋ ಸಾಧ್ಯತೆ ಹೆಚ್ಚಿದೆ ಎಂದು ಇತ್ತೀಚಿಗೆ ನಡೆದ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ನ್ಯೂರೊ ಸೈನ್ಸ್ ಜರ್ನಲ್ ನಲ್ಲಿ ಪ್ರಕಟವಾದ ವರದಿಯಲ್ಲಿ ಕಡಿಮೆ ಗುಣಮಟ್ಟದ ನಿದ್ದೆಯಿಂದಾಗಿ ಮನುಷ್ಯನ ಮೆದುಳಿನಲ್ಲಿ ಮರೆಗುಳಿ ಅಥವಾ ಅಲ್ಜೈಮರ್ ಖಾಯಿಲೆ ಅಭಿವೃದ್ಧಿಯಾಗುತ್ತದೆ ಎನ್ನಲಾಗಿದೆ.

ಅಲ್ಲದೇ ಗುಣಮಟ್ಟದ ನಿದ್ದೆ ಮಾಡಿಲ್ಲವಾದರೆ ಮೆದುಳಿನಲ್ಲಿ ಬೀಟಾ-ಅಮೈಲಾಯ್ಡ್ ಮತ್ತು ಟೌ ಕ್ಲಸ್ಟರ್‌ಗಳು ಉತ್ಪತ್ತಿಯಾಗಿ ಬುದ್ಧಿಮಾಂದ್ಯತೆಯನ್ನು ಉಂಟು ಮಾಡುವ ಅಪಾಯವಿದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

sleep Health Alzheimer Study