ಇವಿಎಂ ತಿರುಚುವಿಕೆ ಪ್ರಾತ್ಯಕ್ಷಿಕೆಗೆ ಅವಕಾಶ ನೀಡಿ ಎಂದು ಮನವಿ


27-06-2019 125

ದೆಹಲಿ: ಕಾಲಿವುಡ್ ನಟ ಮತ್ತು ರಾಜಕಾರಣಿ ಮನ್ಸೂರ್ ಅಲಿಖಾನ್ ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲು ಸಾಧ್ಯ ಎಂದು ಪ್ರಾತ್ಯಕ್ಷಿಕೆ ಕೊಡಲು ಅವಕಾಶ ನೀಡಿ ಎಂದು ಸುಪ್ರೀಂ ಕೋರ್ಟ್‍ನಲ್ಲಿ ಮನವಿ ಸಲ್ಲಿಸಿದ್ದಾರೆ. ನಾಮ್ ತಮಿಳರ್ ಕಚ್ಚಿ ಪಕ್ಷದಿಂ ದಿಂಡಿಗುಲ್ ಸ್ಪರ್ಧಿಸಿದ್ದ ಇವರು, ಡಿಎಂಕೆಯ ವೇಳುಚಾಮಿ ವಿರುದ್ಧ ಸೋಲುಂಡಿದ್ದರು. ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಇವಿಎಂಗಳನ್ನು ತಿರುಚಲಾಗಿದೆ ಎಂದು ಆರೋಪಿಸಿರುವ ಅವರು, ಇವಿಎಂಗಳನ್ನು ತಿರುಚಲು ಸಾಧ್ಯ ಎಂದು ಪ್ರಾತ್ಯಕ್ಷಿಕೆ ನೀಡಲು ಚುನಾವಣಾ ಆಯೋಗಕ್ಕೆ ಆದೇಶ ನೀಡಿ ಎಂದು ಸುಪ್ರೀಂ ಕೋರ್ಟ್‍ನಲ್ಲಿ ಮನವಿ ಮಾಡಿಕೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

EVM Supreme court Mansoor Alikhan Actor