ಬಾಲಾಕೋಟ್ ದಾಳಿಯ ಮಾಂತ್ರಿಕ ಸಮಂತ್ ಗೋಯಲ್ ಈಗ ’ರಾ’ ಮುಖ್ಯಸ್ಥ


26-06-2019 156

ದೆಹಲಿ: ಬಾಲಾಕೋಟ್ ದಾಳಿಯ ನಿಪುಣ ಸಮಂತ್ ಗೋಯಲ್ರನ್ನು ನೂತನ ’ರಾ’(ರಿಸರ್ಚ್ ಆನ್ಡ್ ಅನಾಲಿಸಿಸ್ ವಿಂಗ್) ಮುಖ್ಯಸ್ಥರಾಗಿ ಹಾಗು ಅರವಿಂದ್ ಕುಮಾರ್ ಅವರನ್ನು ಗುಪ್ತಚರ ಇಲಾಖೆಯ ನಿರ್ದೇಶಕರಾಗಿ ನರೇಂದ್ರ ಮೋದಿ ಸರ್ಕಾರ ನೇಮಕ ಮಾಡಿದೆ. ಈ ಇಬ್ಬರು ಐಪಿಎಸ್ ಅಧಿಕಾರಿಗಳು 1984ರ ತಂಡದವರು. ಈ ವರ್ಷ ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆದ ವಾಯುದಾಳಿಯ ಉಸ್ತುವಾರಿಯನ್ನು ಸಮಂತ್ ಗೋಯಲ್ ವಹಿಸಿದ್ದರು. ಗುಪ್ತಚರ ಇಲಾಖೆಯ  ನಿರ್ದೇಶಕರಾಗಿರುವ ಅರವಿಂದ್ ಕುಮಾರ್ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಭಂದಿಸಿದ ವಿಷಯಗಳಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Samant Goel Aravind Kumar RAW Intelligence Bureau