ಕಾಫಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತೆ..!


26-06-2019 228

ನಮ್ಮಲ್ಲಿ ಬಹುತೇಕ ಜನರು ಕಾಫಿ ಪ್ರಿಯರು. ದಿನಕ್ಕೆ 2 ಕಪ್ ನಿಂದ 10 ಕಪ್ ಕಾಫಿ ಕುಡಿಯುವವರೂ ಇದ್ದಾರೆ. ಕಾಫಿಯಲ್ಲಿರೋ ಕೇಫೀನ್ ನಿಂದ ಸಾಕಷ್ಟು ಪ್ರಯೋಜನಗಳಿವೆ. ಆದರೆ ಕಾಫಿ ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್. ಹೌದು.. ಕಾಫಿ ಕುಡಿಯೋದ್ರಿಂದ ತೂಕ ಇಳಿಕೆಯೂ ಆಗುತ್ತದೆ ಎಂದು ಹೊಸ ಅಧ್ಯಯನ ಹೇಳಿದೆ.

ಕಾಫಿ ದೇಹಕ್ಕೆ ಉಷ್ಣ. ಈ ಉಷ್ಣತೆಯಿಂದಾಗಿ ದೇಹದಲ್ಲಿರುವ ದೇಹದಲ್ಲಿರುವ ಸಕ್ಕರೆ ಅಂಶ ಹಾಗೂ ಕೊಬ್ಬು ಕರಗುತ್ತದೆ ಎಂದು ಈ ಕುರಿತು ಅಧ್ಯಯನ ನಡೆಸಿದ ನಾಟಿಂಗ್ ಹ್ಯಾಮ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ತಿಳಿಸಿದ್ದಾರೆ.

ಕಾಫಿ ಸೇವಿಸಿದಾಗ ಉಂಟಾಗುವ ಉಷ್ಣತೆಯಿಂದಾಗಿ ದೇಹ ತಂಪಾಗಿರುವುದರಿಂದ ಉಂಟಾಗಿರುವ ಬ್ರೌನ್ ಫ್ಯಾಟ್ ಕರಗುತ್ತದೆ. ಇದರಿಂದಾಗಿ ತೂಕ ಇಳಿಕೆಗೆ ಅನುಕೂಲವಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ. ಹೀಗಾಗಿ ಒಬೆಸಿಟಿಯಿಂದ ಬಳಲುತ್ತಿರುವವರು.. ತೂಕ ಇಳಿಕೆಗೆ ಕಸರತ್ತು ಮಾಡುತ್ತಿರುವವರು ಕಾಫಿ ಕುಡಿದು ಪ್ರಯೋಜನ ಪಡೆದುಕೊಳ್ಳಬಹುದು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Coffee Weight Loss Diet Obesity