ಆರ್ ಎಸ್ ಎಸ್ ಸೇರಿದ್ರಾ ಪ್ರಿಯಾಂಕಾ ಚೋಪ್ರಾ?


19-06-2019 1820

ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ಪ್ರಿಯಾಂಕಾ ಚೋಪ್ರಾ ಈ ಬಾರಿಗೆ ಮತ್ತೊಂದು ಹೊಸ ಅವತಾರದಿಂದಾಗಿ ಸುದ್ದಿಯಲ್ಲಿದ್ದಾರೆ. ಅವರು ಇತ್ತೀಚಿಗೆ ಧರಿಸಿದ ಖಾಕಿ ಶಾರ್ಟ್ಸ್ ಇದಕ್ಕೆ ಕಾರಣವಾಗಿದೆ. ಆರ್ ಎಸ್ ಎಸ್ ನವರ ಹಳೆಯ ಸಮವಸ್ತ್ರ ಖಾಕಿ ಶಾರ್ಟ್ಸ್ ಮಾದರಿಯನ್ನೇ ಹೋಲುವ ಔಟ್ ಫಿಟ್ ಧರಿಸಿದ್ದ ಪ್ರಿಯಾಂಕಾ ಇಂಟರ್ ನೆಟ್ ನಲ್ಲಿ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದಾರೆ.

ಕಪ್ಪು ಬಣ್ಣದ ಟಾಪ್ ಜೊತೆಗೆ ಲಾಂಗ್ ಜಾಕೆಟ್ ಹಾಗೂ ನೀ ಹೈ ಬೂಟ್ಸ್ ಧರಿಸಿದ್ದ ಪ್ರಿಯಾಂಕಾ ಚೋಪ್ರಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಾಸ್ಯ ಭರಿತ ಕಮೆಂಟ್ ವ್ಯಕ್ತವಾಗುತ್ತಿದೆ. ಪ್ರಿಯಾಂಕಾ ಚೋಪ್ರಾ ಆರ್ ಎಸ್ ಎಸ್ ಸೇರಿದ್ದಾರೆ. ಆರ್ ಎಸ್ ಎಸ್ ನ ಅಂತಾರಾಷ್ಟ್ರೀಯ ರಾಯಭಾರಿ ಇವರು, ಆರ್ ಎಸ್ ಎಸ್ ನ ಸಭೆಗೆ ಹೊರಡಲು ಪ್ರಿಯಾಂಕಾ ರೆಡಿ ಮುಂತಾದ ರೀತಿಯಲ್ಲಿ ಜನರು ಟ್ರೋಲ್ ಮಾಡುತ್ತಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Priyanka Chopra Uniform RSS Troll