ಈ ಲಕ್ಷಣಗಳು ಕಂಡುಬಂದರೆ ಪ್ಯಾಕೆಟ್ ಫುಡ್ ನಿಂದ ದೂರವಿರಿ!


18-06-2019 365

ಪ್ಯಾಕೆಟ್ ಫುಡ್ ಅಂದ್ರೆ ಬಹುತೇಕ ಎಲ್ಲರಿಗೂ ಇಷ್ಟ. ಸಖತ್ ಟೇಸ್ಟಿಯಾಗಿರುವ ಕಾರಣ ಎಲ್ಲರೂ ತಿಂದೇ ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕರ ಅನ್ನೋದು ನೆನಪಿರಲಿ. ಈ ಕೆಳಗಿನ ಲಕ್ಷಣಗಳು ಕಂಡುಬಂದಲ್ಲಿ ನೀವು ಪ್ಯಾಕೆಟ್ ಫುಡ್ ಅನ್ನು ತಿನ್ನದಿರುವುದೇ ಉತ್ತಮ.

ಪ್ಯಾಕೆಟ್ ಆಹಾರದಿಂದ ನಿಮ್ಮಲ್ಲಿ ತೂಕ ಹೆಚ್ಚಳ ಕಂಡುಬಂದರೆ ಅದನ್ನು ಕಡಿಮೆ ಸೇವಿಸಿ ಅಥವಾ ಸಂಪೂರ್ಣವಾಗಿ ನಿಲ್ಲಿಸಿಬಿಡಿ.

ಪ್ಯಾಕೆಟ್ ಫುಡ್ ನಿಂದಾಗಿ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚು ಕಮ್ಮಿಯಾಗಲು ಆರಂಭವಾದರೆ ಅದನ್ನು ಸೇವಿಸುವುದನ್ನು ತಕ್ಷಣ ಕಡಿಮೆ ಮಾಡಿ. ಇದರಿಂದ ಒಬೆಸಿಟಿ, ಮಧುಮೇಹ ಹಾಗೂ ಹೃದಯ ಕಾಯಿಲೆಗಳಿಗೆ ದಾರಿ ಮಾಡಿ ಕೊಡುತ್ತದೆ.

ಪ್ಯಾಕೆಟ್ ಫುಡ್ ತಿನ್ನುವ ಮೊದಲು ಯಾವ ರಾಸಾಯನಿಕ ಹಾಕಿದ್ದಾರೆಂಬ ಬಗ್ಗೆ ತಿಳಿದುಕೊಳ್ಳಿ. ನಿಮಗೆ ಗೊತ್ತಿಲ್ಲದ ರಾಸಾಯನಿಕ ಹಾಕಿ ತಯಾರಿಸಿದ್ದರೆ ಅದನ್ನು ಸೇವಿಸಬೇಡಿ.

ಪೋಷಕಾಂಶಗಳು ಕಡಿಮೆಯಿದ್ದಲ್ಲಿ ಅಂಥ ತಿಂಡಿಗಳಿಂದ ದೂರವಿರಿ. ಕೇವಲ ಸಕ್ಕರೆ ಮಾತ್ರವಿದ್ದರೆ ಅದು ದೇಹಕ್ಕೆ ಇನ್ನಷ್ಟು ಹಾನಿಕರ. ಆದ್ದರಿಂದ ನೀವು ತಿನ್ನುವ ತಿಂಡಿಗಳಲ್ಲಿ ಎಷ್ಟು ಪೋಷಕಾಂಶಗಳಿವೆ, ಸಕ್ಕರೆ, ಫ್ಯಾಟ್ ಕಂಟೆಂಟ್ ಗಳಿವೆ ಅನ್ನೋದನ್ನು ತಿಳಿದುಕೊಂಡಿರಿ.

ಕೆಲವು ಪ್ಯಾಕೆಟ್ ಫುಡ್ ಗಳನ್ನು ತೆಗೆದುಕೊಂಡಲ್ಲಿ ಅದರಿಂದ ಜೀರ್ಣಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Processed Food Consum Health Obesity