ಪ. ಬಂಗಾಳದಲ್ಲಿ ತೀವ್ರ ರೂಪ ಪಡೆದ ವೈದ್ಯರ ಪ್ರತಿಭಟನೆ


14-06-2019 130

ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರ ಮುಷ್ಕರ ಮುಂದಿವರಿದಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ರೋಗಿಯೊಬ್ಬ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರೋಗಿಯ ಕಡೆಯವರು ಕಿರಿಯ ವೈದ್ಯನ ಮೇಲೆ ಹಲ್ಲೆ ನಡೆಸಿ, ಗಂಭೀರ ಗಾಯಗೊಂಡಿರುವ ಪರಿಣಾಮ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ರಕ್ಷಣೆ ಬೇಕು ಎಂಬ ಬೇಡಿಕೆಯನ್ನಿಟ್ಟು ಆರಂಭಗೊಂಡಿರುವ ಪ್ರತಿಭಟನೆ ತೀವ್ರ ರೂಪ ತಾಳಿದೆ.

ಈ ವೇಳೆ ಸಿಎಂ ಮಮತಾ ಬ್ಯಾನರ್ಜಿ ಮನವಿಗೂ ಕ್ಯಾರೆ ಎನ್ನದ ವೈದ್ಯರು ಪ್ರತಿಭಟನೆ ಮುಂದುವರಿಸಿದ್ದಾರೆ. ಈ ಮಧ್ಯೆ ವೈದ್ಯರ ಪ್ರತಿಭಟನೆ ಬೇರೆ ಬೇರೆ ರಾಜ್ಯಗಳಿಗೂ ಹಬ್ಬಿದ್ದು, ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಜೈಪುರದಲ್ಲೂ ವೈದ್ಯರು ಸಾಥ್ ನೀಡಿದ್ದಾರೆ.

ಇನ್ನು, ವೈದ್ಯರ ಪ್ರತಿಭಟನೆಯಿಂದ ಪಶ್ಚಿಮ ಬಂಗಾಳದಲ್ಲಿ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುವಂತಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

West Bengal Mamata Banerjee Doctors Strike Protest