ತೂಕ ಇಳಿಕೆಗೆ ಈ ಆಹಾರ ಸೇವಿಸಿ


14-06-2019 578

ಸ್ಥೂಲಕಾಯ ಅನ್ನೋದು ಇತ್ತೀಚಿಗೆ ಎಲ್ಲ ಕಡೆಗಳಲ್ಲೂ ಕಂಡುಬರುತ್ತಿರುವ ಸಮಸ್ಯೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಎಲ್ಲರೂ ಸಾಕಷ್ಟು ಪ್ರಯತ್ನ ಪಡುತ್ತಿರುತ್ತಾರೆ. ವ್ಯಾಯಾಮ, ಡಯೆಟ್ ಹೀಗೆ ಒಂದಲ್ಲ ಒಂದು ವಿಧಾನ ಅನುಸರಿಸುತ್ತಿರುತ್ತಾರೆ. ಹಾಗೆ ಮಾಡುವವರು ಈ ಕೆಳಗಿನ ಆಹಾರ ಸೇವಿಸಿದರೆ ಸಾಕಷ್ಟು ಬೇಗ ತೂಕ ಇಳಿಸಿಕೊಳ್ಳಬಹುದೆಂದು ತಜ್ಞರು ಹೇಳುತ್ತಾರೆ.

ಎಳೆ ಸೋಯಾಬೀನ್ ನಲ್ಲಿ 100 ಗ್ರಾಂ ನಲ್ಲಿ 11 ಗ್ರಾಂ ನಷ್ಟು ಪ್ರೋಟೀನ್ ಇರುತ್ತದೆ. ಇದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆಯುತ್ತದೆ. ಇದರಲ್ಲಿ ವಿಟಾಮಿನ್ ಸಿ, ಐರನ್, ಕ್ಯಾಲ್ಸಿಯಂ ಇರುವುದರಿಂದ ದೇಹದಲ್ಲಿರುವ ಹೆಚ್ಚಿನ ಕೊಬ್ಬಿನಾಂಶ ತೆಗೆಯುತ್ತದೆ.

ಹಸಿರು ಬಟಾಣಿಯಲ್ಲಿ ಕಡಿಮೆ ಕ್ಯಾಲರಿಗಳಿದ್ದು, ಇದರಲ್ಲೂ ಪ್ರೊಟೀನ್ ಸಮೃದ್ಧವಾಗಿದೆ. ಕಡಿಮೆ ಕ್ಯಾಲರಿ ಇರುವುದರಿಂದ ಆರೋಗ್ಯಕರ ಡಯೆಟ್ ಇದು ಒಳ್ಳೆಯದು.

ಮಶ್ರೂಮ್ ಗಳಲ್ಲೂ ಕಡಿಮೆ ಕ್ಯಾಲರಿಗಳಿದ್ದು, ಹೆಚ್ಚಿನ ಪ್ರೋಟೀನ್ ಇದೆ. 100 ಗ್ರಾಂ ಪ್ರೊಟೀನ್ ನಲ್ಲಿ 3.1 ಗ್ರಾಂ ನಷ್ಟು ಪ್ರೊಟೀನ್ ಇರುತ್ತೆ. ಹೀಗಾಗಿ ಇದು ತೂಕ ಇಳಿಕೆಗೆ ಸಹಕಾರಿ.

ಪಾಲಕ್ ಸೊಪ್ಪಿನಲ್ಲಿ ಕೂಡ ಐರನ್ ಹಾಗೂ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು, ಇದರಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ ಇರುತ್ತದೆ.

ಕೋಸುಗಡ್ಡೆಯಲ್ಲೂ ಕೂಡ ಸಾಕಷ್ಟು ಪ್ರೊಟೀನ್ ಇದ್ದು ಇದೂ ಕೂಡ ತೂಕ ಇಳಿಕೆಗೆ ಸಹಕಾರಿ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Diet Health Protein Calories