ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಯುವಿ


10-06-2019 308

ಸುದೀರ್ಘ ಅವಧಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಕ್ರಿಕೆಟರ್ ಯುವರಾಜ್ ಸಿಂಗ್ ಇಂದು ಅಧಿಕೃತವಾಗಿ ತಮ್ಮ ಕ್ರೀಡಾ ಬದುಕಿಗೆ ವಿದಾಯ ಹೇಳಿದ್ದಾರೆ. 25 ವರ್ಷಗಳ ನಂತರ ಮತ್ತು 22 ಯಾರ್ಡ್‍ಗಳ ಸುತ್ತಮುತ್ತ, 17 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‍ ಒಳ ಹೊರಗು ನೋಡಿದ್ದೇನೆ. ನಾನು ನಿವೃತ್ತಿಯಾಗಲು ನಿರ್ಧರಿಸಿದ್ದೇನೆ ಎಂದು ಅವರು ತಮ್ಮ ವಿದಾಯದ ಕುರಿತು ಪ್ರತಿಕ್ರಿಯಿಸಿದ್ದಾರೆ. ಕ್ರಿಕೆಟ್ ನನಗೆ ಹೇಗೆ ಹೋರಾಡಬೇಕು, ಹೇಗೆ ಬೀಳಬೇಕು, ಹೇಗೆ ಧೂಳಿನಿಂದ ಎದ್ದು ಬರಬೇಕು, ಹೇಗೆ ಮತ್ತೊಮ್ಮೆ ಮೇಲಕ್ಕೆ ಬರಬೇಕು, ಮುನ್ನಡೆಯಬೇಕು ಎಂಬುದನ್ನು ಕಲಿಸಿದೆ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Yuvaraj Singh Retires Cricket Retires