ಚಿತ್ರ ವಿಮರ್ಶೆ ; ಭಾರತ್


06-06-2019 208

ನಿನ್ನೆ ಬಿಡುಗಡೆಯಾದ ಭಾರತ್ ಚಿತ್ರಕ್ಕೆ ವೀಕ್ಷಕರಿಂದ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೇವಲ ಒಂದು ಸ್ಟಾರ್ ಮಾರ್ಕ್ ಪಡೆದುಕೊಂಡಿದೆ. ಈ ಚಿತ್ರವನ್ನು ಅಲಿ ಅಬ್ಬಾಸ್ ಜಫರ್ ನಿರ್ದೇಶನ ಮಾಡಿದ್ದಾರೆ. ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಮುಖ್ಯ ಭೂಮಿಕೆಯಲ್ಲಿದ್ದು, ದಿಶಾ ಪಠಾಣಿ, ಟಬು, ಸುನೀಲ್ ಗ್ರೋವರ್, ಜಾಕಿಶ್ರಾಫ್ ಮುಂತಾದವರು ಅಭಿನಯಿಸಿದ್ದಾರೆ.

ವ್ಯಕ್ತಿ ಹಾಗೂ ದೇಶ ಜೊತೆ ಜೊತೆಯಾಗಿ ಸಾಗುವ ಕಥೆ ಹೊಂದಿದೆ ಭಾರತ್ ಚಿತ್ರ. 8 ವರ್ಷದ ಹುಡುಗ ಭಾರತ್, ಏನೇ ಆದರೂ ತನ್ನ ಕುಟುಂಬವನ್ನು ಜೊತೆಯಾಗೇ ಮುನ್ನಡೆಸುವ ಬಗ್ಗೆ ತಂದೆಗೆ ಮಾತು ಕೊಟ್ಟಿರುತ್ತಾನೆ. ಸಾಕಷ್ಟು ಕಷ್ಟ, ಸಮಸ್ಯೆ, ಸವಾಲುಗಳ ಮಧ್ಯೆ ಮುಂದಿನ 60 ವರ್ಷ ಹೇಗೆ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುತ್ತಾನೆ ಎಂಬುದು ಚಿತ್ರದ ಕಥೆ.

ಚಿತ್ರದ ಪ್ಲಸ್ ಪಾಯಿಂಟ್ : ಚಿತ್ರದ ಮೇಕಿಂಗ್ ಅದ್ಭುತವಾಗಿದೆ. ಸ್ಥಳ, ಸೆಟ್, ಕಾಸ್ಟ್ಯೂಮ್ಸ್, ಪೋಟೋಗ್ರಫಿ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದ ಕ್ಲೈಮ್ಯಾಕ್ಸ್ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್.

ಚಿತ್ರದ ಮೈನಸ್ ಪಾಯಿಂಟ್ : ಚಿತ್ರದ ಸಾಧಾರಣವಾಗಿದೆ. ಪ್ರೇಕ್ಷಕರು ಎದ್ದು ಚಪ್ಪಾಳೆ ಹೊಡೆಯುವಂಥ ಯಾವುದೇ ಸೀನ್ ಇಲ್ಲ.

ಕತ್ರೀನಾ ಕೈಫ್ ರನ್ನು ತೀರಾ ವಯಸ್ಸಾದವರಂತೆ ತೋರಿಸಲಾಗಿದೆ. ಕಾಮಿಡಿಯನ್ ಸುನೀಲ್ ಗ್ರೋವರ್ ಪ್ರೇಕ್ಷಕರನ್ನು ನಗಿಸುವಲ್ಲಿ ವಿಫಲರಾಗಿರುವುದು. ಭಾವನಾತ್ಮಕ ಸೀನ್ ಗಳ್ಯಾವವೂ ವೀಕ್ಷಕರ ಮನಸ್ಸಿಗೆ ತಾಕುವುದಿಲ್ಲ.

ನಮ್ಮ ದೇಶದಲ್ಲಿ ಒಟ್ಟು 4 ಸಾವಿರ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಸಾಧಾರಣ ಪ್ರತಿಕ್ರಿಯೆ ದೊರೆತಿದೆ. ನಿನ್ನೆ ಈದ್ ಹಿನ್ನೆಲೆಯಲ್ಲಿ ರಜೆ ಇದ್ದರೂ ದಕ್ಷಿಣ ಆಫ್ರಿಕಾ ವಿಶ್ವಕಪ್ ಪಂದ್ಯ ಇದ್ದ ಹಿನ್ನೆಲೆಯಲ್ಲಿ ಭಾರತ್ ಕಲೆಕ್ಷನ್ ಕಡಿಮೆಯಾಗಿರಬಹುದು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Bharat Eid Movie Review Salman Khan