ಕಾಶ್ಮೀರದಲ್ಲಿ ಕಲ್ಲೆಸೆತ


05-06-2019 125

ಶ್ರೀನಗರ: ಶ್ರೀನಗರದ ಜಾಮಿಯಾ ಮಸೀದಿ ಬಳಿ ಭದ್ರತಾಪಡೆಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಪ್ರತಿಭಟನಾ ನಿರತರು ಭಯೋತ್ಪಾದಕ ಜಾಕೀರ್ ಮುಸಾ ಮತ್ತು ಅಮೆರಿಕ ಭಯೋತ್ಪಾದಕ ಎಂದು ಘೋಷಿಸಿರುವ ಮಸೂದ್ ಅಜರ್‍ನ ಬೆಂಬಲಿಗರಾಗಿದ್ದಾರೆ. ಪ್ರತಿಭಟನೆ ವೇಳೆ ಇವರಿಬ್ಬರ ಭಾವಚಿತ್ರಗಳು, ಅವರನ್ನು ಬೆಂಬಲಿಸುವ ಪೋಸ್ಟರ್‍ಗಳನ್ನು ಇವರು ಹಿಡಿದುಕೊಂಡಿರುವ ದೃಶ್ಯಗಳು ಸೆರೆಯಾಗಿವೆ. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Terror Masjid Security Force Kashmir