ಕಾಶಿ ವಿಶ್ವನಾಥನಿಗೆ ‘ನಮೋ’ ನಮನ


27-05-2019 173

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ಷೇತ್ರ ವಾರಣಾಸಿಗೆ ಇಂದು ಭೇಟಿ ನೀಡಿದ್ದಾರೆ. ಕಾಶಿ ವಿಶ್ವನಾಥನ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪುಷ್ಪ, ಪತ್ರ, ಜಲ ಮತ್ತು ಕ್ಷೀರಾಭಿಷೇಕ ಮಾಡಿ ನಮಿಸಿದರು.

ಮೋದಿಯವರು ಸ್ವತಃ ಕಾಶಿ ವಿಶ್ವನಾಥನಿಗೆ ಪೂಜೆ ನೆರವೇರಿಸುವಾಗ ದೇಗುಲದಲ್ಲಿ ಕ್ಯಾಮೆರಾಮನ್‍ಗಳು ದೇವಾಲಯದ ಗರ್ಭಗುಡಿಯೊಳಕೆ ಹಾಜರಿರುವುದು ಕಂಡುಬಂದಿದೆ. ಮೋದಿಯವರು ಅಭಿಷೇಕ ಮಾಡುವ ವೇಳೆ ದೃಶ್ಯದಲ್ಲಿ ಕೆಲವು ಛಾಯಾಗ್ರಾಹಕರು ಮತ್ತು ಅವರ ಕ್ಯಾಮೆರಾಗಳು ಕಾಣಿಸಿಕೊಂಡಿವೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Narendra Modi Kashi Varanasi Vishwanath Temple