ಚುನಾವಣಾ ಫಲಿತಾಂಶ: ಮುಗಿಲು ಮುಟ್ಟಿದ ಬಿಜೆಪಿ ಸಂಭ್ರಮ


23-05-2019 176

ಲೋಕಸಭಾ ಚುಣಾವಣಾ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ  ಬಹುಮತ ಪಡೆಯುವುದು ಬಹುತೇಕ ಖಚಿತಗೊಂಡಿರುವಂತೆ ದೇಶಾದ್ಯಂತ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಕೇಸರಿ ಪಡೆ ಕುಣಿದು, ಕುಪ್ಪಳಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದೆ. ದೆಹಲಿಯಲ್ಲಿ ಬಿಜೆಪಿ ಘಟಕ 350 ಕೆಜಿ ಲಡ್ಡು, ಬರ್ಫಿಗಳಿಗೆ ಆರ್ಡರ್ ಮಾಡಿದ್ದು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಇನ್ನು ಕರ್ನಾಟಕದಲ್ಲೂ 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು ಕಾರ್ಯಕರ್ತರು ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ದೇಶಾದ್ಯಂತ ಬಿಜೆಪಿ ಅಲೆಯ ನಡುವೆ, ತಮಿಳುನಾಡಿನಲ್ಲಿ ಯುಪಿಎ ಮೈತ್ರಿಕೂಟ ಡಿಎಂಕೆಗೆ ಅಭೂತಪೂರ್ವ ಗೆಲುವಿನ ನಿರೀಕ್ಷೆ ಮೂಡಿದೆ. ಆರಂಭದ ಕೆಲವು ಸುತ್ತಿನ ಮತ ಎಣಿಕೆ ಮುಗಿದಿದ್ದು, ಡಿಎಂಕೆ 30-34 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನ ಪಕ್ಷದ ಕಚೇರಿ ಮುಂದೆ ನೆರೆದ ಡಿಎಂಕೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

BJP Result Lokasabha Election DMK