ಬ್ಯಾಗ್ ನಿಂದ ಟ್ರೋಲ್ ಆದ ಆಲಿಯಾ


07-05-2019 248

ಬಾಲಿವುಡ್ ನ ಕ್ಯೂಟ್ ಬ್ಯೂಟಿ ಆಲಿಯಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಚೆಂದದ ಅಭಿನಯ, ಸೌಂದರ್ಯದಿಂದ ಸಾಕಷ್ಟು ಫ್ಯಾನ್ ಫಾಲೋವರ್ಸ್ ಗಳಿಸಿದ್ದರೂ ಅವರನ್ನು ಟ್ರೋಲ್ ಮಾಡುವವರಿಗೇನೂ ಕಡಿಮೆಯಿಲ್ಲ.

ನಿನ್ನೆಯಷ್ಟೇ ಏರ್ ಪೋರ್ಟ್ ಗೆ ಬಂದಿಳಿದ ಆಲಿಯಾ ಸಿಂಪಲ್ ಟಿ ಶರ್ಟ್ ಹಾಗೂ ಜೀನ್ಸ್ ನಲ್ಲಿ ಮುದ್ದಾಗಿ ಕಾಣುತ್ತಿದ್ದರು. ಆದರೆ ಎಲ್ಲರ ಗಮನ ಸೆಳೆದಿದ್ದು ಅವರು ಹಾಕಿಕೊಂಡಿದ್ದ ಕೆಂಪು ಬಣ್ಣದ ಪರ್ಸ್. ಬರೋಬ್ಬರಿ 6 ಲಕ್ಷ ಬೆಲೆ ಬಾಳುವ ಈ 2 ಸೈಡ್ ಪರ್ಸ್ ಹಾಕಿಕೊಂಡಿದ್ದ ಆಲಿಯಾ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

2 ಸೈಡ್ ಪರ್ಸ್ ಹಾಕಿಕೊಂಡಿದ್ದ ಆಲಿಯಾ ರನ್ನು ಸಾಕಷ್ಟು ಜನರು ಟ್ರೋಲ್ ಮಾಡುತ್ತಿದ್ದಾರೆ. ಥೇಟ್ ಕಾರ್ಟೂನ್ ಥರ ಕಾಣುತ್ತಿದ್ದಾರೆ. ಪರ್ಸ್ ಮಾರುವವರ ಥರ ಕಾಣುತ್ತಿದ್ದಾರೆ, ಕೆಟ್ಟದಾಗಿ ಕಾಣುತ್ತಿದೆ, ನಗು ತರಿಸುವಂತಿದೆ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Alia Bhatt Fashion Bollywood Troll