ವಾರಣಾಸಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ


25-04-2019 162

ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸಲಿರುವ ವಾರಣಾಸಿ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

ಪ್ರಸಿದ್ಧ ಹಿಂದೂ ವಿಶ್ವವಿಶ್ವವಿದ್ಯಾಲಯದ ಸಮೀಪ ಲಂಕಾ ಗೇಟ್ ಬಳಿಯಿಂದ ತಮ್ಮ ಪ್ರಚಾರ ಆರಂಭಿಸಲಿರುವ ಮೋದಿ ಪವಿತ್ರ ದಶಾಶ್ವಮೇಧ ಘಾಟ್ ಬಳಿ ಪ್ರಚಾರ ಕೊನೆಗೊಳಿಸಲಿದ್ದಾರೆ. ಪ್ರಧಾನಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಪಕ್ಷದ ಪ್ರಮುಖ ಗಣ್ಯರು ಸಾಥ್ ನೀಡಲಿದ್ದಾರೆ.   

ಇನ್ನು ತೀವ್ರ ಕುತೂಹಲ ಕೆರಳಿಸಿರುವ ವಾರಣವಾಸಿ ಕ್ಷೇತ್ರದಲ್ಲಿ ನಾಳೆ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Varanasi Loksabha Election Road Show Narendra Modi