ಕೃಷಿ ಅಭಿವೃದ್ಧಿಯಾಗದೇ, ಮತ್ಯಾವುದು ಸರಿಯಾದ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ !


08-06-2017 530

ನವದೆಹಲಿ:- ರೈತರು ತಮ್ಮ ಜೀವನೋಪಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವುದು ದುರದುಷ್ಟಕರ, ಎಂದು ಭಾರತದ ಹಸಿರು ಕ್ರಾಂತಿಯ ಹರಿಕಾರ ಎಮ್ ಎಸ್ ಸ್ವಾಮಿನಾಥನ್ ಹೇಳಿದ್ದಾರೆ. ಕಳೆದ 3-4 ದಿನಗಳಿಂದ ಭೋಪಾನ್ ನಲ್ಲಿ ನೆಡಯುತ್ತಿರುವ ರೈತರ ಭಾರೀ ಪ್ರತಿಭಟನೆ ಮತ್ತು ದೇಶದಲ್ಲಿ ರೈತರ ಸ್ಥಿತಿಗತಿಗಳನ್ನು ಗುರಿಯನ್ನಾಗಿಸಿ ಈ ಮಾತನ್ನು ಹೇಳಿದ್ದಾರೆ. ​​​​​​ಸರ್ಕಾರವು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದರು. ಅಲ್ಲದೆ ಭಾರತದ ಕೃಷಿ ಸರಿಯಾದ ಮಾರ್ಗದಲ್ಲಿ ನಡೆಯದಿದ್ದರೆ ಮತ್ಯಾವುದು ಸರಿಯಾದ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. ರಾಷ್ಟ್ರೀಯ ರೈತ ಯೋಗದ ಶಿಫಾರಸ್ಸುಗಳನ್ನು ಸೂಕ್ತವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.