ಧರ್ಮಸ್ಥಳದಲ್ಲಿ ದೇವರು ಯಾರು?


21-04-2019 268

ಜೀ ಟಿವಿಯ ಕಳೆದ ವಾರದ ಸರಿಗಮಪ ಸಂಚಿಕೆಯ ಕೊನೆಯಲ್ಲಿ ಆ ಕಾರ್ಯಕ್ರಮದ ಯ್ಯಾನ್ಕರ್ ಅನುಶ್ರೀ ಎಂಬಾಕೆ ಈ ವಾರ ಆರಂಭವಾಗುತ್ತಿದ್ದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಬಗ್ಗೆ ಹೇಳುತ್ತಾ ಈ ವಾರದ ಅತಿಥಿಯ ಬಗ್ಗೆ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ವ್ಯಕ್ತಪಡಿಸುತ್ತ 'ಮುಂದಿನ ವಾರದಿಂದ  ಶನಿವಾರ ಮತ್ತು ಭಾನುವಾರ ರಾತ್ರಿ ಒಂಬತ್ತೂವರೆ ಗಂಟೆಗೆ ಪ್ರಸಾರವಾಗುವ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಭಾಗವಹಿಸುವ ಅತಿಥಿ ಧರ್ಮಸ್ಥಳದ ಧರ್ಮಾಧಿಕಾರಿ, ಧರ್ಮಸ್ಥಳದ ದೇವರೆಂದೇ ಕರೆಯಲ್ಪಡುವ ಶ್ರೀ ವೀರೇಂದ್ರ ಹೆಗ್ಗಡೆಯವರು' ಎಂದು ಹೇಳಿದರು. ಆದರೆ ಜನರಿಗೆ ಗೊತ್ತಿರುವ ರೀತಿ ಧರ್ಮಸ್ಥಳದ ದೇವರು ಶ್ರೀ ಮಂಜುನಾಥ ಸ್ವಾಮಿ. ಶ್ರೀ ವೀರೇಂದ್ರ ಹೆಗ್ಗಡೆಯವರು ಯಾವಾಗ ಧರ್ಮಸ್ಥಳದ ದೇವರಾದರೆಂದು ಅನೇಕರಿಗೆ ಗೊತ್ತಿಲ್ಲ ಮತ್ತು 'ಒಂದು ಪಕ್ಷ ಅವರು ದೇವರಾಗಿಬಿತ್ತಿದ್ದರೆ ಶ್ರೀ ಮಂಜುನಾಥ ಸ್ವಾಮಿ ಇನ್ನು ಮುಂದೆ ದೇವರಲ್ಲವೇ?' ಎಂಬ ಪ್ರಶ್ನೆ ಕೂಡ ಜನರನ್ನು ಕಾಡತೊಡಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಪಟ್ಟ ಒಂದು ವಂಶಪಾರಂಪರ್ಯದ ಪಟ್ಟ ಅದು ಆ ದೇವಸ್ಥಾನವನ್ನು ನಡೆಸುವ ಕುಟುಂಬದ ಖಾಸಗಿ ಸಂಪ್ರದಾಯ. ಅದು ಧರ್ಮಸ್ಥಳದ ಎಲ್ಲಾ ಭಕ್ತರ ಮೇಲೆ ಅಧಿಕಾರ ಚಲಾಯಿಸಬಹುದಾದ ಪಟ್ಟವಲ್ಲ. ಹಾಗಿರುವಾಗ ಒಂದು ಖಾಸಗಿ ಮನೋರಂಜನಾ ವಾಹಿನಿ ಕೆಲವು ವ್ಯಕ್ತಿಗಳ ಖಾಸಗಿ ಅಭಿಪ್ರಾಯವನ್ನು ಎಲ್ಲರ ಅಭಿಪ್ರಾಯ ವೆಂಬಂತೆ ಬಿಂಬಿಸಿದ್ದು ಹೇಗೆ ಎಂದು ಅನೇಕರು ಕೇಳುತ್ತಿದ್ದಾರೆ. ಹಾಗೇ ವೀರೇಂದ್ರ ಹೆಗ್ಗಡೆ ಅವರೊಂದಿಗೆ ನಡೆದ ಕಾರ್ಯಕ್ರಮದಲ್ಲಿ ದಯನೀಯ ರೀತಿಯಲ್ಲಿ ರಮೇಶ್ ನಡೆದುಕೊಂಡಿದ್ದು ಒಂದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂಥಾದ್ದಲ್ಲ ಎಂದೂ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ