ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ!


20-04-2019 127

ದೆಹಲಿ: ಆನ್‍ಲೈನ್ ಮಾಧ್ಯಮಗಳಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ವಿಚಾರ ಪ್ರಕಟವಾಗಿದೆ. 22 ನ್ಯಾಯಮೂರ್ತಿಗಳಿಗೆ ಮನವಿ ಮಾಡಿರುವ ಸುಪ್ರೀಂ ಕೋರ್ಟ್‍ನ ಮಾಜಿ ಉದ್ಯೋಗಿ, ನ್ಯಾ. ರಂಜನ್ ಗೊಗೋಯ್ ಅವರು ನನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಈ ಕುರಿತು ವಿಶೇಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಆರೋಪವನ್ನು ನಿರಾಕರಿಸಿರುವ ನ್ಯಾ. ರಂಜನ್ ಗೊಗೋಯ್, ತಮ್ಮ ಮೇಲಿನ ಆರೋಪ ನಿರಾಧಾರ ಎಂದಿದ್ದಾರೆ. ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಗಂಭೀರ ಬೆದರಿಕೆ ಇದೆ ಮತ್ತು ಇದರಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಬುಡಮೇಲು ಮಾಡುವ ಗೊಡ್ಡ ಸಂಚಿದೆ. ಲೈಂಗಿಕ ಕಿರುಕುಳ ಆರೋಪದ ಹಿಂದೆ ದೊಡ್ಡ ಪಡೆಯೇ ಇದೆ ಎಂದರು.

ಲೈಂಗಿಕ ಕಿರುಕುಳ ಆರೋಪದಿಂದ ನನಗೆ ತೀವ್ರ ಆಘಾತವಾಗಿದೆ. 4 ಮಾಧ್ಯಮ ಸಂಸ್ಥೆಗಳು ಈ ವಿಷಯವನ್ನು ತುಂಬಾ ವಿವರಗಳೊಂದಿಗೆ ಪ್ರಕಟಿಸಿವೆ. ಅವರಿಂದ ನನಗೆ ವಿಷಯ ತಿಳಿದಿದೆ ಎಂದರು.

ಈ ಕುರಿತು ಸುದ್ದಿ ಪ್ರಟಿಸುವುದನ್ನು ತಡೆಯುವಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಪೀಠ ಯಾವುದೇ ಆದೇಶವನ್ನು ನೀಡಿಲ್ಲ. ಸ್ವತಂತ್ರ ನ್ಯಾಯಾಂಗದ ರಕ್ಷಣೆಗಾಗಿ ಈ ವಿಷಯವನ್ನು ನಿರ್ಬಂಧಿಸಬೇಕು ಎಂದಿದೆ ಎಂದು ವರದಿಯಾಗಿದೆ.


ಒಂದು ಕಮೆಂಟನ್ನು ಬಿಡಿ