ಕರ್ಕರೆ ಸತ್ತಿದ್ದು ನನ್ನ ಶಾಪದಿಂದ - ಬಿಜೆಪಿ ಸಾಧ್ವಿ


20-04-2019 142

ಭೂಪಾಲ್: ನನ್ನ ಶಾಪ ಮತ್ತು ಅವರ ಕರ್ಮದಿಂದಲೇ ಹೇಮಂತ್ ಕರ್ಕರೆ ಸಾವಿಗೀಡಾಗಿದ್ದಾರೆ ಎಂದು ಬಿಜೆಪಿ ಲೋಕಸಭೆ ಅಭ್ಯರ್ಥಿ ಸಾದ್ವಿ ಪ್ರಜ್ಞಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೇಮಂತ್ ಕರ್ಕರೆ ತನಿಖಾಧಿಕಾರಿಯಾಗಿದ್ದ ಅವಧಿಯಲ್ಲಿ ಹಿಂದೂ ಸಂಘಟನೆಯ ಹಲವು ಸದಸ್ಯರನ್ನು ಬಂಧಿಸಿದ್ದರು. ನನ್ನನ್ನು ಬಂಧಿಸಿದ್ದಾಗ ನನಗೆ ಕಿರುಕುಳ ನೀಡಿದ್ದರು ಎಂದು ಆರೋಪಿಸಿರುವ ಅವರು, ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿರಲಿಲ್ಲ. ಆದ್ದರಿಂದ ನನ್ನನ್ನು ಹೋಗಲು ಬಿಡುವಂತೆ ಕೋರಿದ್ದೆ. ಆದರೆ ಕರ್ಕರೆ ನಿರಾಕರಿಸಿದ್ದರು. ನನ್ನ ವಿರುದ್ಧ ಸಾಕ್ಷಿ ತರುವುದಾಗಿ ಹೇಳಿದ್ದರು. ನಾನು ಆಗ ಅವರಿಗೆ ಶಾಪ ಹಾಕಿದ್ದೆ. ಆದ್ದರಿಂದಲೇ ಕರ್ಕರೆ ಮಡಿದಿದ್ದಾರೆ ಎಂದು ಅವರು ಹೇಳಿದ್ದಾರೆ.

 

26/11 ಮುಂಬಯಿ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಉಗ್ರ ನಿಗ್ರಹ ದಳದ ಅಧಿಕಾರಿ ಹೇಮಂತ್ ಕರ್ಕರೆ ಅವರ ವಿರುದ್ಧ ಬಿಜೆಪಿ ಲೋಕಸಭೆ ಅಭ್ಯರ್ಥಿ ನಾಲಿಗೆ ಹರಿಬಿಟ್ಟಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ,  ಬಿಜೆಪಿ ಅಭ್ಯರ್ಥಿ ಅತಿಮಾನುಷ ಶಕ್ತಿಯಿಂದ ಕರ್ಕರೆಯವರಿಗೆ ಹಾನಿಯಾಯಿತು ಎಂದಿದ್ದಾರೆ. ನೀವು ಬಿಜೆಪಿಗೆ ಮತಹಾಕಿದರೆ ಮೂರ್ಖರಿಗೆ ಮತ ಹಾಕಿದಂತೆ ಎಂದಿದ್ದಾರೆ.

 

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಕೂಡ ಟ್ವೀಟ್ ಮಾಡಿದ್ದು, ಭಯೋತ್ಪಾದಕರು ಹೇಮಂತ್ ಕರ್ಕರೆಯವರ ಕುರಿತು ಏನನ್ನು ಚಿಂತಿಸುತ್ತಾರೆ ಎಂಬ ಸಂಗತಿಯನ್ನು ನಾನು ತಿಳಿದುಕೊಳ್ಳಬಯಸುವುದಿಲ್ಲ. ಅವರ ಹೇಳಿಕೆಯಿಂದ ಹೇಮಂತ್ ಕರ್ಕರೆಯವರ ಭದ್ರತೆಯ ಕೆಲಸಕ್ಕೆ ಧಕ್ಕೆ ಇಲ್ಲ. ಭಯೋತ್ಪಾದಕರಿಗೆ ಮಹತ್ವ ನೀಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

 

2008ರ ಮಾಲೇಂಗಾವ್ ಸ್ಪೋಟದ ಆರೋಪಿ ಸಾಧ್ವಿ ಪ್ರಜ್ಞಾ ಸದ್ಯಕ್ಕೆ ಅನಾರೋಗ್ಯದ ಮೇಲೆ ಜಾಮೀನು ಪಡೆದು ಹೊರಬಂದಿದ್ದು, ಭೂಪಾಲ್್ನಿಂೋದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

sadhvi Terror 26/11 BJP