ಬಿಜೆಪಿಯವರದ್ದು ಲೂಟಿ ಹೊಡೆಯುವ ಸಂಸ್ಕøತಿ-ಎಚ್.ಡಿ.ಕುಮಾರಸ್ವಾಮಿ


29-03-2019 200

ಬಿಜೆಪಿಯವರದ್ದು ಲೂಟಿ ಹೊಡೆಯುವ ಸಂಸ್ಕøತಿ ಎಂದು ವಾಗ್ದಾಳಿ ನಡೆಸಿರುವ  ಸಿ.ಎಂ.ಎಚ್.ಡಿ.ಕುಮಾರಸ್ವಾಮಿ  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಏನೇನು ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಿದೆ ಅದನ್ನು ಸದ್ಯ ದಲ್ಲೆ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದರು

ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ನಾವು ಯಾವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ಬುಡಮೇಲು ಮಾಡಿಲ್ಲ. ತಮ್ಮಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗಿದೆ ಎಂಬ ಹೇಳಿಕೆ ನೀಡಲು ಯಡಿಯೂರಪ್ಪನವರಿಗೆ ಯಾವ ನೈತಿಕತೆಯೂ ಇಲ್ಲ. ತಮ್ಮ ವಿರುದ್ಧ ಯಡಿಯೂರಪ್ಪನವರು ಹಾಕಿದ್ದ ಕೇಸುಗಳಿಗೆ ಸಂಬಂಧಿಸಿದಂತೆ 12 ವರ್ಷಗಳಿಂದಲೂ ಹೋರಾಟ ಮಾಡುತ್ತಲೇ ಇದ್ದೇನೆ. ಯಡಿಯೂರಪ್ಪನವರು ಯಾವ ರೀತಿ ಕೇಸ್‍ಗಳನ್ನು ವಿಲೇವಾರಿ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿದೆ. ಎಂದು ತಿಳಿಸಿದರು

ನಾವು ಯಾವುದೇ ಸಂವಿಧಾನ, ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ನ್ಯಾಯಯುತವಾಗಿ ಹೋರಾಟ ಮಾಡುತ್ತಿರುವುದಾಗಿ ವಾಗ್ದಾಳಿ ನಡೆಸಿದರು. ಈ ಹಿಂದೆ ತಾವು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವಾಗ ಬಿಎಂಟಿಸಿಯಲ್ಲಿ ಒಂದು ಸಾವಿರ ಕೋಟಿ ರೂ. ಡಿಪಾಸಿಟ್ ಇಡಲಾಗಿತ್ತು. ಆದರೆ, ಅಶೋಕ್ ಅವರು ಬಿಎಂಟಿಸಿಯನ್ನು ಹರಾಜಿಗೆ ತಂದರು ಎಂದು ಟೀಕಾಪ್ರಹಾರ ನಡೆಸಿದರು.

ಐಟಿ ಅಧಿಕಾರಿಗಳಿಗೆ ಹಣ ಸಿಕ್ಕಿತೇ?:  ನಿನ್ನೆ ರಾಜ್ಯದ ಹಲವೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜೆಡಿಎಸ್ ನಾಯಕರ ಬೆಂಬಲಿಗರ ಮನೆ ಮೇಲೆ ನಡೆಸಿದ ದಾಳಿ ನಡೆಸಿದ ಸಂದರ್ಭದಲ್ಲಿ ಎಲ್ಲಾದರೂ ಹತ್ತು ರೂಪಾಯಿ ಸಿಕ್ಕಿದೆಯೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಯಾವ ಕಾರಣಕ್ಕಾಗಿ ದಾಳಿ ಮಾಡಿದ್ದಾರೆ ಎಂಬುದು ಗೊತ್ತಿದೆ.

ಉದ್ದೇಶಪೂರ್ವಕವಾಗಿ ಯಾರ್ಯಾರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂಬುದರ ಮಾಹಿತಿ ಇದೆ. ಬಿಜೆಪಿ ನಾಯಕರ ಮನೆಗಳ ಮೇಲೆ ಏಕೆ ದಾಳಿ ನಡೆಸಿಲ್ಲ ಎಂದು ಪ್ರಶ್ನಿಸಿದರು.  ಬಿಜೆಪಿಯವರೆಲ್ಲ ಬಡವರು. ಹಣವಿಲ್ಲದೆ ಕೈ ಮುಗಿದುಕೊಂಡು ವೋಟು ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Loksabha 2019 #Congress #Bjp #Kumarswamy