ಮೋದಿ ಭಾಷಣಕ್ಕೆ ಆಯೋಗದ ಕ್ಲೀನ್ ಚಿಟ್ 


29-03-2019 377

ಮಿಶನ್ ಶಕ್ತಿಯ ಬಗ್ಗೆ ಪ್ರಧಾನಿ ಮೋದಿ ಮಾಡಿದ್ದ ಭಾಷಣವನ್ನು ಕಾರಣವಾಗಿಟ್ಟುಕೊಂಡು ನೀತಿಸಂಹಿತೆ ಉಲ್ಲಂಘನೆ ಎಂದು ಗಲಾಟೆ ಎಬ್ಬಿಸಿದ್ದ ವಿಪಕ್ಷಗಳಿಗೆ ನಿರಾಸೆ ಎದುರಾಗಿದೆ. ಮಿಶನ್ ಶಕ್ತಿ ವೇಳೆ ಮೋದಿ ಮಾಡಿದ ಭಾಷಣಕ್ಕೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದ್ದು, ವಿಪಕ್ಷಗಳಿಗೆ ತೀವ್ರ ಮುಖಭಂಗವಾದಂತಾಗಿದೆ.

ಮಿಶನ್ ಶಕ್ತಿಯ ಕಾರ್ಯವೈಖರಿಯ ಬಗ್ಗೆ ಮೋದಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದರು. ಇದನ್ನು ನೀತಿ ಸಂಹಿತೆ ಉಲ್ಲಂಘನೆ ಎಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಯಾವತಿ ಸೇರಿದಂತೆ ವಿಪಕ್ಷಗಳು ಆಯೋಗಕ್ಕೆ ದೂರು ನೀಡಿದ್ದವು. 
ಪ್ರತಿಪಕ್ಷಗಳ ದೂರು ಆಧರಿಸಿ ಉಪಚುನಾವಣಾ ಆಯುಕ್ತ  ಸಂದೀಪ್ ಸಕ್ಷೇನಾ ನೇತೃತ್ವದ  ಸಮಿತಿಯು ದೂರದರ್ಶನ ಮತ್ತು ಆಕಾಶವಾಣಿಗಳಿಂದ ಭಾಷಣದ ಮಾಹಿತಿ ಪಡೆದುಕೊಂಡು ಪರಿಶೀಲಿಸಿತ್ತು. 
ಪರಿಶೀಲನೆ ಬಳಿಕ ಸಮಿತಿಯು ಭಾಷಣಕ್ಕೆ ಕ್ಲೀನ್ ಚಿಟ್ ನೀಡಿದ್ದು, ಮೋದಿ ಅವರು ಬಿಜೆಪಿ ಹೆಸರನ್ನು  ಭಾಷಣದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.  ಅಲ್ಲದೆ ಅವರು ಎಲ್ಲೂ ಕೂಡ ಮತಯಾಚನೆ ಮಾಡಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ. 
ಮೋದಿ ರಾಷ್ಟ್ರ ಉದ್ದೇಶಿಸಿ ಮಾತನಾಡುತ್ತಿದ್ದಂತೆ, ರಾಹುಲ್ ಗಾಂಧಿ ಹಾಗೂ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಜ್ಞಾನಿಗಳ ಸಾಧನೆಯನ್ನು ಮೋದಿ  ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾರೆ.  ಅವರು ಅದನ್ನು ತಮ್ಮ ಸರ್ಕಾರದ ಸಾಧನೆಯಾಗಿ ಬಿಂಬಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದೀಗ ಪರಿಶೀಲನಾ ಸಮಿತಿಯು ಮೋದಿಗೆ ಕ್ಲೀನ್ ಚಿಟ್ ನೀಡಿದ್ದು, ವಿರೋದ ಪಕ್ಷಗಳಿಗೆ ತೀವ್ರ ಮುಖಭಂಗ ಎದುರಾಗಿದೆ. 
 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Mission shakti #Speach #Narendra Modi #Cleen Chit